-->

ನಿಮ್ಮ ಮನೆಯ ವಿದ್ಯುತ್ ದೀಪಗಳನ್ನು ನಿಮ್ಮ ಮೂತ್ರದಿಂದಲೇ ಬೆಳಗಬಹುದು!

ನಿಮ್ಮ ಮನೆಯ ವಿದ್ಯುತ್ ದೀಪಗಳನ್ನು ನಿಮ್ಮ ಮೂತ್ರದಿಂದಲೇ ಬೆಳಗಬಹುದು!

ಬ್ರಿಸ್ಟಲ್‌/ ಬ್ರಿಟನ್: ಇನ್ಮುಂದೆ ನಿಮ್ಮ ಮನೆಗಳಿಗೆ ಬೇಕಾದ ವಿದ್ಯುತ್ ಅನ್ನು ನಿಮ್ಮ ಮಾತ್ರದಿಂದಲೇ ತಯಾರಿಸಬಹುದು.
ಡೈಲಿ ಸ್ಟಾರ್ ಪತ್ರಿಕೆ ಈ ಅಚ್ಚರಿಯ ವರದಿಯನ್ನು ಪ್ರಕಟಿಸಿದೆ.  ಈ  ವರದಿ ಪ್ರಕಾರ ಮೂತ್ರದಿಂದ ಉತ್ಪತ್ತಿಯಾಗುವ ವಿದ್ಯುತ್ ಮೇಲೆ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ‌.  ಇದು ಭವಿಷ್ಯದಲ್ಲಿ ವಿದ್ಯುತ್ ಶಕ್ತಿಗೆ ಶುದ್ಧ ಪರ್ಯಾಯ ಆಯ್ಕೆಯ ಜೊತೆಗೆ ಅಗ್ಗದ ಆಯ್ಕೆ ಕೂಡ ಆಗಲಿದೆ ಎಂದು ಡೈಲಿ ಸ್ಟಾರ್‌ ವರದಿ ಮಾಡಿದೆ.

ಬ್ರಿಟನ್ ನ ಬ್ರಿಸ್ಟಲ್‌ನಲ್ಲಿರುವ ಸಂಶೋಧಕರ ತಂಡವು ಎರಡು ವರ್ಷಗಳ ಹಿಂದೆಯೇ ಮಾನವ ಮಲ ಮತ್ತು ಮೂತ್ರದಿಂದ ಹೊಸ ಶುದ್ಧ ಶಕ್ತಿ ಇಂಧನ ಕೋಶವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕೋಶವು ಮಾನವ ತ್ಯಾಜ್ಯವನ್ನು ವಿದ್ಯುತ್ ಶಕ್ತಿಯಾಗಿ ಆಗಿ ಪರಿವರ್ತಿಸಲಿದೆ. ಈ ಶಕ್ತಿಯಿಂದ ಇಡೀ ಮನೆಯನ್ನು ಬೆಳಗಬಹುದು ಎಂದು ಸಂಶೋಧನೆ ತಿಳಿಸಿದೆ.

ಈ ಯೋಜನೆಗೆ ವಿಜ್ಞಾನಿಗಳು Pee Power Project ಎಂದು ಹೆಸರಿಸಿದ್ದು,  2 ವರ್ಷಗಳ ಹಿಂದೆ ಗ್ಲಾಸ್ಟನ್‌ಬರಿ ಉತ್ಸವದಲ್ಲಿ ಎಲ್ಲರ ಮುಂದೆ ಪ್ರದರ್ಶಿಸಲಾಗಿತ್ತು. ಅಲ್ಲಿ ಮೂತ್ರದಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದರು. 

ಈ ಸಂಶೋಧನಾ ವಿಜ್ಞಾನಿಗಳ ಪ್ರಕಾರ, 5 ದಿನಗಳ ಕಾಲ ನಡೆದ ಉತ್ಸವಕ್ಕೆ ಬಂದ ಜನರ ಮೂತ್ರದ ಪ್ರಮಾಣದಿಂದ ಗಂಟೆಗೆ 300 ವ್ಯಾಟ್ ವಿದ್ಯುತ್ ಉತ್ಪಾದಿಸಿದ್ದಾರೆ. ಮೂತ್ರದಿಂದ ತಯಾರಿಸಿದ ಈ ವಿದ್ಯುತ್‌ನಿಂದ  10 ವ್ಯಾಟ್ ಸಾಮರ್ಥ್ಯದ ಬಲ್ಬ್ ಅನ್ನು 30 ಗಂಟೆಗಳ ಕಾಲ ಉರಿಸಬಹುದು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99