
Amazon ಡೆಲಿವರಿ ವಾಹನದ ಹಿಂಬದಿಯಿಂದ ಯುವತಿಯನ್ನು ರಹಸ್ಯವಾಗಿ ಹೊರಗಿಳಿಸಿದ Delivery Boy
ಫ್ಲೋರಿಡಾ/ ಅಮೇರಿಕಾ: ಅಮೇಝಾನ್ ಕಂಪೆನಿಯ ಡೆಲಿವರಿ ವಾಹನದಿಂದ ಹಾಡ ಹಗಲೇ ನಡು ರಸ್ತೆಯಲ್ಲಿ ಯುವತಿಯೋರ್ವಳನ್ನು ಅದರೊಳಗಿನಿಂದ ಯುವಕನೋರ್ವ ಹೊರಗಿಳಿಸುವ ವೀಡಿಯೋ ವೈರಲಾಗಿದೆ. ಈ ವೀಡಿಯೋ ವೈರಲಾದ ಕೂಡಲೇ ಕಂಪನಿ ಆ ವಾಹನದಲ್ಲಿದ್ದ ಡೆಲಿವರಿ ಬಾಯ್‌ಯನ್ನು ಕೆಲಸದಿಂದ ವಜಾಗೊಳಿಸಿದೆ.
ಈ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದ್ದು, ಯಾರೋ ಈ ವೀಡಿಯೋವನ್ನು ಚಿತ್ರೀಕರಿಸಿ ಟಿಕ್‌ಟಾಕ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಬಳಿಕ ಇದು ವೈರಲ್ ಆಗಿದೆ.
11 ಸೆಕೆಂಡ್ ನ ಈ ವೀಡಿಯೋ ದಲ್ಲಿ ವ್ಯಾನ್‌ನ ಹಿಂಬದಿಯ ಬಾಗಿಲು ತೆರೆದು ಯುವತಿ ಇಳಿದು ಮೊಬೈಲ್ ನೋಡುತ್ತಾ ನಡೆದುಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
ಇದರ ಹಿಂದೆ ಏನೋ ರಹಸ್ಯ ಇದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದು, ಹಾಗಾದರೆ ಅದರೊಳಗೆ ಏನು ನಡೆದಿರಬಹುದೆಂದು ಪ್ರಶ್ನಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಅಮೆಜಾನ್, ಚಾಲಕ ಮತ್ತು ಡೆಲಿವರಿ ಬಾಯ್‌ಯನ್ನು ಕಂಪನಿಯಿಂದ ವಜಾ ಮಾಡಲಾಗಿದೆ. ಅಮೆಜಾನ್ ವಸ್ತು ವಿತರಣಾ ವ್ಯಾನ್ಗಳಲ್ಲಿ ಇತರನ್ನು ಕರೆದೊಯ್ಯುವಂತಿಲ್ಲ ಎಂದು ಕಂಪನಿ ಉತ್ತರಿಸಿದೆ.