
ಕೊರೋನಾ ಕಾಲದ ವಿಶೇಷ ರೈಲು ದರ ರದ್ದು: ಇನ್ಮುಂದೆ ಹಿಂದನದ್ದೇ ದರ
ನವದೆಹಲಿ: ಕೊರೋನಾ ಸಂದರ್ಭದಲ್ಲಿ ವಿಶೇಷ ರೈಲುಗಳಿಗೆ ವಿಧಿಸಲಾಗಿದ್ದ ವಿಶೇಷ ದರವನ್ನು ರದ್ದುಪಡಿಸುಂತೆ ರೈಲ್ವೆ ಮಂಡಳಿ ದೇಶದ ಎಲ್ಲ ರೈಲ್ವೆ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ. ಕೊರೊನಾ ವೇಳೆ ಕೆಲ ರೈಲುಗಳಿಗೆ ನೀಡಲಾಗಿದ್ದ ವಿಶೇಷ ದರವನ್ನು ಹಿಂಪಡೆದು ಮೊದಲಿನ ದರ ನಿಗದಿ ಮಾಡಲು ಮಂಡಳಿ ಸೂಚನೆ ನೀಡಿದೆ.
ಕೊರೋನಾ ಸಂದರ್ಭದಲ್ಲಿ ಪ್ರಾರಂಭಿಸಲಾಗಿದ್ದ ವಿಶೇಷ ರೈಲು ಸೇವೆಗೆ ಸಾಮಾನ್ಯ ಟಿಕೆಟ್ ದರಕ್ಕಿಂತ ಶೇ. 30 ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಿದ್ದರು. ಇದೀಗ ರೈಲ್ವೆ ಇಲಾಖೆ ವಿಶೇಷ ರೈಲುಗಳ ದರವನ್ನು ಹಿಂಪಡೆದಿದ್ದರಿಂದ ಮೊದಲ ದರದಲ್ಲೇ ಪ್ರಯಾಣ ಮಾಡಬಹುದಾಗಿದೆ.