
ನಿಮ್ಮ ವಾಟ್ಸಪ್ ಚಾಟ್‌ಗಳು ಗೌಪ್ಯವಾಗಿರಬೇಕೇ? ಈಗ ಬಂದಿದೆ ಹೊಸ ಸೌಲಭ್ಯ
ಕ್ಯಾಲಿಫೋರ್ನಿಯಾ: ಹೆಚ್ಚಿನವರಿಗೂ ತಮ್ಮ ಕೆಲವು ವಾಟ್ಸಪ್ ಚಾಟ್‌ಗಳು ಗೌಪ್ಯವಾಗಿರಬೇಕೆಂದಿರುತ್ತದೆ. ಇದಕ್ಕಾಗಿಯೇ ವಾಟ್ಸಪ್ ಕಂಪನಿ ತಮ್ಮ ಬಳಕೆದಾರರಿಗೆ ಹೊಸ ಸೌಲಭ್ಯ ವನ್ನು ಪರಿಚಯಿಸುತ್ತಿದೆ.
ವಾಟ್ಸ್‌ಆ್ಯಪ್ ಚಾಟ್ ಗಳನ್ನು ಶಾಶ್ವತವಾಗಿ ಗೌಪ್ಯವಾಗಿ ಸಂಗ್ರಹಿಸಿಡಲು “ಆರ್ಕೀವ್’ (Archive) ಎಂಬ ಹೊಸ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ.
ಒಮ್ಮೆ ನೀವು ವಾಟ್ಸಪ್ ನಲ್ಲಿ ಒಂದು ನಂಬರ್ ಅಥವಾ ಗ್ರೂಪ್ ನ್ನು ಆರ್ಕೀವ್ ಮಾಡಿದರೆ ಚಾಟಿಂಗ್‌ನ ಎಲ್ಲಾ ಸಂದೇಶಗಳು ಗುಪ್ತವಾಗಿ ಅರ್ಕೀವ್ ಸೇರುತ್ತೆ.
ಆರ್ಕೀವ್ ಮಾಡುವುದು ಹೇಗೆ?:
ನಿಮಗೆ ಯಾವುದಾದರೂ ನಂಬರ್ ಅಥವಾ ಗ್ರೂಪನ್ನು ಆರ್ಕೀವ್ ಮಾಡಬೇಕಿದ್ದರೆ, ಆ ಗ್ರೂಪ್ ಅಥವಾ ನಂಬರ್‌ನ ಚಾಟ್ ಮೇಲೆ ಬೆರಳನ್ನು ಒತ್ತಿ ಹಿಡಿಯಬೇಕು.
ಆವಾಗ ಪರದೆಯ ಮೇಲ್ಫಾಗದಲ್ಲಿ ಮೂರು ಆಪ್ಷನ್ ಕಾಣಿಸುತ್ತವೆ. ಅದರಲ್ಲಿ ಎಡದಿಂದ ಮೂರನೇ ಆಪ್ಷನ್ ಆದ ಬಾಣದ ಗುರುತು ಒತ್ತುವ ಮೂಲಕ ನೀವು ಆಯ್ಕೆ ಮಾಡಿದ ಚಾಟ್ ಅನ್ನು ಆರ್ಕೀವ್ ಮಾಡಬಹುದು. ನಿಮಗೆ ಬೇಕಾದಾಗ ಅದನ್ನು “ಅನ್-ಆರ್ಕೀವ್’ ಮಾಡಬಹುದು.