ಯುವತಿಯ ಸ್ಯಾನಿಟರಿ ಪ್ಯಾಡ್ ಮತ್ತಿತರ ಕಡೆ ಇತ್ತು ಡ್ರಗ್ಸ್: ಸಮುದ್ರ ಮಧ್ಯದ ಪಾರ್ಟಿಯ ರೋಚಕ ರೈಡ್ ಕಥೆ
Monday, October 4, 2021
ಮುಂಬೈ: ಇತ್ತೀಚೆಗೆ ಮುಂಬೈಯ ಸಮುದ್ರ ಮಧ್ಯೆ ನಡೆದ ಡ್ರಗ್ ಪಾರ್ಟಿ ಮೇಲಿನ ರೈಡ್ ರೋಚಕವಾಗಿತ್ತು. ಗ್ರಾಹಕರ ಸೋಗಿನಲ್ಲಿ ಹಡಗಿನಲ್ಲಿ ಹೊರಟಿದ್ದ NCB (ನಾರ್ಕೋಟಿಕ್ ಕಂಟ್ರೋಲ್ ಬ್ಯುರೋದ) ಅಧಿಕಾರಿಗಳಿಗೆ ಅಮಲು ಪದಾರ್ಥಗಳು ಎಲ್ಲೆಲ್ಲಾ ಸಿಕ್ಕಿತ್ತು ಅಂತಾ ಗೊತ್ತಾದ್ರೆ ನೀವು ಬೆಚ್ಚಿ ಬೀಳ್ತೀರಾ..
NCN ಅಧಿಕಾರಿಗಳು ನಡೆಸಿದ ದಾಳಿ ವೇಳೆ ಶಾರೂಖ್ ಖಾನ್ ಪುತ್ರನ ಕನ್ನಡಕದ ಕವರ್, ಇದೇ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದ ಯುವತಿಯ ಬ್ಯಾಗ್‌ನಲ್ಲಿದ್ದ ಸ್ಯಾನಿಟರಿ ಪ್ಯಾಡ್ ಹಾಗೂ ಮೆಡಿಸಿನ್ ಬಾಕ್ಸ್‌ನಲ್ಲಿ ಮಾದಕ ದ್ರವ್ಯಗಳು ಪತ್ತೆಯಾಗಿತ್ತು ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ದಾಳಿ ವೇಳೆ, ಆಶೀಶ್ ಆಯಿಲ್, ಎಂಡಿಎಂಎ, ಚರಸ್, ಕೊಕೇನ್ ಮೊದಲಾದ ಮಾದಕ ವಸ್ತುಗಳು ಪತ್ತೆಯಾಗಿದೆ.