ಇನ್ನು ಅಮೇರಿಕಾದಲ್ಲೂ ದೊರೆಯಲಿದೆ ಉಡುಪಿ ಇಡ್ಲಿ: ಕರಾವಳಿಯ ಖಾದ್ಯಕ್ಕೆ ಅಮೇರಿಕಾದಲ್ಲೂ ಮಾನ್ಯತೆ
Monday, October 4, 2021
ಉಡುಪಿ: ಹೊಟೇಲ್ ರಂಗದಲ್ಲಿ ಉಡುಪಿ ತನ್ನದೇ ಛಾಪು ಮೂಡಿಸಿದೆ. ನೀವು ವಿಶ್ವದ ಯಾವ ಮೂಲೆಗೆ ಹೋದ್ರೂ ಅಲ್ಲೊಂದು ಉಡುಪಿ ಹೊಟೇಲ್ ಕಾಣಸಿಗುತ್ತದೆ. ಇದೀಗ ಉಡುಪಿಯ ಇಡ್ಲಿಗೆ ದೂರದ ಅಮೇರಿಕಾದಲ್ಲೂ ಮಾನ್ಯತೆ ದೊರಕಿದೆ.
ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್‌ನವರು ಉಡುಪಿ ಇಡ್ಲಿ ಬ್ರ್ಯಾಂಡ್‍ಗೆ ಟ್ರೇಡ್ ಮಾರ್ಕ್ ಅನ್ನು ಪಡೆದಿದ್ದಾರೆ.
ಉಡುಪಿ ವಿಶೇಷಗಳಾದ ಉದ್ದಿನ ಇಡ್ಲಿ, ರವೆ ಇಡ್ಲಿ, ಜೊತೆಗೆ ಚಟ್ನಿ, ಸಾಂಬಾರ್ ಕೂಡಾ ಅಲ್ಲಿ ಸಿಗಲಿದೆ. ಪ್ಯಾಕ್‌ಡ್ ಆಹಾರಗಳಾದ ಇವೆಲ್ಲವನ್ನೂ ಬಿಸಿ ಮಾಡಿ ತಿನ್ನುವುದಷ್ಟೆ ಅಲ್ಲಿನವರಿಗೆ ಕೆಲಸ.