ದಿಢೀರ್ ಸ್ಥಗಿತಗೊಂಡ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ: ಬಳಕೆದಾರರ ಒದ್ದಾಟ
Monday, October 4, 2021
ನವದೆಹಲಿ: ಸೋಮವಾರ ರಾತ್ರಿ 9 ಗಂಟೆಯಿಂದ ಪ್ರಾರಂಭಗೊಂಡು ಹಲವು ತಾಸುಗಳ ಕಾಲ ವಿಶ್ವದಾದ್ಯಂತ ವಾಟ್ಸಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ದಿಢೀರ್ ಸ್ಥಗಿತಗೊಂಡಿದ್ದು, ಸರ್ವರ್ ಡೌನ್ ಆದ ಹಿನ್ನೆಲೆಯಲ್ಲಿ ಈ ರೀತಿ ಆಗಿರಬಹುದೆಂದು ಅಂದಾಜಿಸಲಾಗಿದೆ.
ಈ ಮೂರೂ ತಾಣಗಳು ದಿಢೀರ್ ಸ್ಥಗಿತದಿಂದಾಗಿ ಬಳಕೆದಾರರು ಪರದಾಡಿದ್ದು, ತಮ್ಮ ಅಳಲನ್ನು ಟ್ವಿಟರ್ ಖಾತೆಯಲ್ಲಿ ತೋಡಿಕೊಂಡಿದ್ದಾರೆ.
ಈ ಕುರಿತಂತೆ ಫೇಸ್‌ಬುಕ್ ಮತ್ತು ವಾಟ್ಸಪ್ ಕಂಪನಿ ಟ್ವೀಟ್ ಮಾಡಿದ್ದು, ಈ ವಿಚಾರವು ತಮ್ಮ ಗಮನಕ್ಕೆ ಬಂದಿದ್ದು, ಇವೆಲ್ಲವನ್ನು ಮತ್ತೆ ಹಿಂದಿನ ಸ್ಥಿತಿಗೆ ಆದಷ್ಟು ಬೇಗ ತರುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಆಗಿರುವ ಪ್ರಮಾದಕ್ಕೆ ಗ್ರಾಹಕರ ಬಳಿ ಕ್ಷಮೆ ಕೋರಿದ್ದಾರೆ.
ಅದಾಗ್ಯೂ ಸರ್ವರ್ ಡೌನ್ ನಿಂದಾಗಿ ಈ ರೀತಿ ಆಗಿರಬಹುದೆಂದು ಅಂದಾಜಿಸಲಾಗಿದೆ.