
ಕುರುಡ ಅಧ್ಯಾಪಕ ಕ್ಲಾಸ್ ಮಾಡುತ್ತಿದ್ದ ವೇಳೆ ಡ್ಯಾನ್ಸ್ ಮಾಡಿದ ವಿದ್ಯಾರ್ಥಿಗಳು: ವಿಕೃತಿಯ ವೀಡಿಯೋ ವೈರಲ್
Tuesday, October 5, 2021
ಚೆನ್ನೈ: ದೃಷ್ಟಿ ಮಾಂದ್ಯ ಅಧ್ಯಾಪಕನೊಬ್ಬ ಕ್ಲಾಸ್ ತೆಗೆಯುತ್ತಿದ್ದ ವೇಳೆ ಆತನ ತರಗತಿಯಲ್ಲಿ ಡ್ಯಾನ್ಸ್ ಮಾಡಿದ ಘಟನೆ ತಮಿಳುನಾಡಿನ ನಾಮಕಲ್ ಜಿಲ್ಲೆಯ ರಾಸಿಪುರಂ ಸರಕಾರಿ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳು ತರಗತಿ ನಡೆಯುತ್ತಿದ್ದ ವೇಳೆ ಡ್ಯಾನ್ಸ್ ಮಾಡಿದ ದೃಶ್ಯಗಳನ್ನು ಸಹಪಾಠಿ ವಿದ್ಯಾರ್ಥಿಗಳೇ ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗಿದೆ.
ಇತಿಹಾಸ ಅಧ್ಯಾಪಕನಾಗಿರುವ ಪನೀರ್ ಸೆಲ್ವಂ ಕುರುಡರಾಗಿದ್ದರು. ಇವರು ತರಗತಿ ನಡೆಸುತ್ತಿದ್ದ ವೇಳೆ ಇಬ್ಬರು ವಿದ್ಯಾರ್ಥಿಗಳು ಅವರ ಮುಂದೆ ಡ್ಯಾನ್ಸ್ ಮಾಡಿದ್ದರು. ಇದನ್ನು ಮತ್ತೋರ್ವ ವಿದ್ಯಾರ್ಥಿ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ. ಬಳಿಕ ಇದಕ್ಕೆ ಸಿನಿಮಾ ಹಾಡು ಸೇರಿಸಿ ವೈರಲ್ ಮಾಡಲಾಗಿತ್ತು.
ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಚರ್ಚೆಗೆ ಗ್ರಾಸವಾಗಿದೆ. ಪಿಟಿಎ ಮೀಟಿಂಗ್ ನಿರ್ಧಾರ ಕೈಗೊಂಡು ಈ ಮೂವರು ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಗಿದೆ.