5 ವರ್ಷದಲ್ಲಿ ಈತ ಮದುವೆಯಾಗಿದ್ದು 75 ಯುವತಿಯರನ್ನು: ಬಳಿಕ ಅವರನ್ನು ಸೆ*ಕ್ಸ್ ದಂಧೆಗೆ ತಳ್ಳುತ್ತಿದ್ದ
Tuesday, October 5, 2021
ಇಂದೋರ್: ಬಡ ಮತ್ತು ನಿರ್ಗತಿಕ ಯುವತಿಯರನ್ನು ಮದುವೆಯಾಗಿ ಬಳಿಕ ಅವರನ್ನು ಸೆ*ಕ್ಸ್ ದಂಧೆಗೆ ತಳ್ಳುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನ ಇಂದೋರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುನೀರ್ ಎಂದು ಗುರುತಿಸಲಾಗಿದ್ದು, ಈತ ಬಾಂಗ್ಲಾದೇಶ ಮೂಲದವನು ಎಂದು ತಿಳಿದು ಬಂದಿದೆ.
ಮುನೀರ್ ಕಳೆದ 5 ವರ್ಷದಲ್ಲಿ ಸುಮಾರು 75ರಷ್ಟು ಬಾಂಗ್ಲಾದೇಶದ ಬಡ ಮತ್ತು ನಿರ್ಗತಿಕ ಯುವತಿಯರನ್ನು ಮದುವೆಯಾಗಿದ್ದು, ಅವರೆಲ್ಲರನ್ನೂ ಭಾರತದ ಹಲವೆಡೆ ವೇಶ್ಯಾವಾಟಿಕೆಗೆ ದೂಡಲಾಗಿದೆ ಎಂದು ಮುನೀರ್ ಪೊಲೀಸರೆದುರು ಬಾಯಿ ಬಿಟ್ಟಿದ್ದಾನೆ.
ಈತ ಸುಮಾರು 200ಕ್ಕೂ ಅಧಿಕ ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ಕರೆ ತಂದಿದ್ದು, ಇವರನ್ನೆಲ್ಲಾ ಅಕ್ರಮವಾಗಿ ಬಾಂಗ್ಲಾದಿಂದ ಭಾರತಕ್ಕೆ ಕರೆ ತರಲಾಗಿತ್ತು.
ಬಳಿಕ ಇಲ್ಲಿ ಅವರನ್ನು ಸೆ*ಕ್ಸ್ ವರ್ಕ್‌ಗೆ ತರಬೇತಿ ನೀಡಲಾಗುತ್ತಿದ್ದು, ನಂತರ ದೇಶದ ವಿವಿಧೆಡೆಯ ವೇಶ್ಯಾವಾಟಿಕೆ ಕೇಂದ್ರಗಳಿಗೆ ಅವರನ್ನು ಕಳುಹಿಸಿಕೊಡಲಾಗುತ್ತಿತ್ತು