ಮಲ್ಪೆಯಲ್ಲಿ ಮೀನುಗಾರರ ಬಲೆಗೆ ಬಿತ್ತು ಹೆಲಿಕಾಪ್ಟರ್ ಫಿಶ್: ಭಾರೀ ಗಾತ್ರದ ಈ ಅಪರೂಪದ ಮೀನು ನೋಡಲು ಈ ವೀಡಿಯೋ ನೋಡಿ
Tuesday, October 5, 2021
ಉಡುಪಿ: ಮೀನುಗಾರಿಕೆಗೆಂದು ಮಲ್ಪೆ ಬಂದರಿನಿಂದ ತೆರಳಿದ್ದ ಮೀನುಗಾರರ ಬಲೆಗೆ ಅಪರೂಪದ ಮೀನೊಂದು ಸಿಕ್ಕಿದೆ.
ನೆಮ್ಮೀನ್ ಎಂಬ ಹೆಸರಿನ ಈ ಭಾರೀ ಗಾತ್ರದ ಮೀನಿಗೆ ಉದ್ದ ಬಾಲ ಮತ್ತು ಬೆನ್ನ ಮೇಲೆ ಎರಡೂ ಕಡೆ ಅಗಲವಾದ ರೆಕ್ಕೆ ಇರುವುದರಿಂದ ಇದನ್ನು ಸ್ಥಳೀಯವಾಗಿ ಹೆಲಿಕಾಪ್ಟರ್ ಮೀನು ಎನ್ನುತ್ತಾರೆ.
ಮಲ್ಪೆ ಬಂದರನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದಕ್ಕೆ ಇತರ ಮೀನುಗಳ ಜೊತೆ ಈ ಮೀನು ಸಿಕ್ಕಿದೆ. ಸುಮಾರು 85 ಕೆಜಿಯಷ್ಟು ತೂಕ ಹೊಂದಿದ್ದ ಈ ಮೀನಿಗೆ ಕೇರಳದಲ್ಲಿ ಜಾಸ್ತಿ ಬೇಡಿಕೆ ಇರುವುದರಿಂದ ಅಲ್ಲಿಗೆ ಸಾಗಿಸಲಾಗಿದೆ.
ಕರಾವಳಿಯ ಜನ ಈ ಮೀನನ್ನು ತಿನ್ನುವುದು ಕಡಿಮೆ ಆಗಿರುವುದರಿಂದ ಇಲ್ಲಿ ಅದಕ್ಕೆ ಬೇಡಿಕೆ ಕಡಿಮೆ.