ಜಾಲತಾಣ ಸ್ಥಗಿತದಿಂದ ಜುಕರ್‌ಬರ್ಗ್ ಕಳೆದುಕೊಂಡದ್ದು ಎಷ್ಟು ಕೋಟಿ ಗೊತ್ತಾ?
Tuesday, October 5, 2021
ನವ ದೆಹಲಿ: ಸೋಮಾರ ರಾತ್ರಿಯಿಂದ ಸುಮಾರು 6 ಗಂಟೆಗಳ ಕಾಲ ಫೇಸ್‌ಬುಕ್, ವಾಟ್ಸಪ್ ಮತ್ತು ಇನ್‌ಸ್ಟಾಗ್ರಾಂ ಸ್ಥಗಿತದಿಂದ ಸುಮಾರು 7 ಬಿಲಿಯನ್ ಡಾಲರ್‌ನಷ್ಟು ನಷ್ಟ ಕಂಡಿದೆ.
ಈ ಮೂರು ಜಾಲ ತಾಣಗಳ ಸೇವೆ ಸ್ಥಗಿತದಿಂದ ಬಳಕೆದಾರರು ಆಕ್ರೋಶಗೊಂಡಿದ್ದು, ಈ ಪರಿಣಾಮ ಸಂಸ್ಥೆಯ ಶೇರು ಮೌಲ್ಯ 4.9ರಷ್ಟು ಕುಸಿತ ಕಂಡಿದೆ.
ಸಂಸ್ಥೆಯ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರ ಒಟ್ಟು ವೈಯಕ್ತಿಕ ಸಂಪತ್ತಿನ ಮೌಲ್ಯ 121.6 ಬಿಲಿಯನ್ ಡಾಲರ್ ಆಗಿದ್ದು ಬ್ಲೂಂಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಲ್ಲಿ ಅವರು ಬಿಲ್ ಗೇಟ್ಸ್ ಗಿಂತಲೂ ಕೆಳಗಿನ ಸ್ಥಾನದಲ್ಲಿದ್ದಾರೆ.