ಕೇಳಿದ್ದು ಸಂಬಳ, ಹಾರಿಸಿದ್ದು ಗುಂಡು; ತಗುಲಿದ್ದು ಮಾತ್ರ ಮಗನಿಗೆ
Tuesday, October 5, 2021
ಮಂಗಳೂರು: ಸಂಬಳ ವಿಚಾರವಾಗಿ ಸಿಬ್ಬಂದಿ ಜೊತೆ ನಡೆದ ವಾಗ್ವಾದದಿಂದ ಕೋಪಗೊಂಡ ಉದ್ಯಮಿಯೋರ್ವ ಶೂಟೌಟ್ ಮಾಡಿದ್ದು, ದುರದೃಷ್ಟವಶಾತ್ ಗುಂಡು ಉದ್ಯಮಿಯ ಮಗನ ತಲೆಗೆ ತಗುಲಿದ ಘಟನೆ ಮಂಗಳೂರಿನ ಮೋರ್ಗನ್ಸ್ ಗೇಟ್ ಬಳಿ ನಡೆದಿದೆ.
ಮೋರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊಲ ಪ್ರೈ.ಲಿ. ಮಾಲಕ ರಾಜೇಶ್ ಪ್ರಭು ಹಾರಿಸಿದ ಗುಂಡು ಸ್ವತಃ ಆತನ ಮಗ ಸುದೀಂದ್ರನ ತಲೆಗೆ ಹೊಕ್ಕಿದೆ.
ಕೂಡಲೇ ಸುದೀಂದ್ರನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜೇಶ್ ಪ್ರಭು ಬಳಿ ಕೆಲಸ ಮಾಡುವ ಸಿಬ್ಬಂದಿ ಓರ್ವ ಸಂಬಳ ವಿಚಾರವಾಗಿ ಮಾತನಾಡುತ್ತಿದ್ದ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಕೋಪಗೊಂಡಿದ್ದ ರಾಜೇಶ್ ಪ್ರಭು ಗುಂಡು ಹಾರಿಸಿದ್ದ.
ಘಟನೆ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಈ ಘಟನೆ ಯಾವ ಕಾರಣಕ್ಕಾಗಿ ನಡೆದಿದೆ ಎಂದು ತಿಳಿದು ಬಂದಿಲ್ಲ. ಘಟನೆಯಲ್ಲಿ ಬಳಸಿರುವ ಗನ್ ಪರವಾನಿಗೆ ಹೊಂದಿದ್ದು, ಎರಡು ರೌಂಡ್ ಗುಂಡು ಹಾರಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.