
ನೋಡ ನೋಡುತ್ತಿದ್ದಂತೆ ಕುಸಿದ ಬಹುಮಹಡಿ ಕಟ್ಟಡ: ಏಕಾ ಏಕಿ ಕುಸಿದ video ನೋಡಿ
Friday, October 8, 2021
ಬೆಂಗಳೂರು: ನೋಡ ನೋಡುತ್ತಿದ್ದಂತೆ 4 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದ ಘಟನೆ ಬೆಂಗಳೂರಿನ ಕಸ್ತೂರಿ ನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಈ ದುರ್ಘಟನೆಯಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಕಟ್ಟಡದಲ್ಲಿ 8 ಫ್ಲ್ಯಾಟ್ ಗಳಿದ್ದು, ಎಲ್ಲವನ್ನೂ ಬಾಡಿಗೆಗೆ ಕೊಡಲಾಗಿತ್ತು.
ಆದರೆ ಘಟನೆ ವೇಳೆ ಮೂವರು ಮಾತ್ರ ಕಟ್ಟಡದೊಳಗಿದ್ದು, ಶಬ್ದ ಕೇಳಿದ ಕೂಡಲೇ ಅವರು ಹೊರಗಡೆ ಓಡಿ ಬಂದಿದ್ದಾರೆ.
ಉಳಿದವರೆಲ್ಲಾ ಕಚೇರಿ ಮತ್ತಿತರ ಕೆಲಸಗಳಿಗಾಗಿ ಹೊರಗಡೆ ಹೋಗಿದ್ದರೆಂದು ತಿಳಿದುಬಂದಿದೆ.
ಕಟ್ಟಡದ ಮೇಲೆ ಅಕ್ರಮವಾಗಿ ಡ್ಯುಪೆಕ್ಸ್ ಮನೆ ನಿರ್ಮಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಬಿಲ್ಡರ್ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುದು ಎಂದು ಪಾಲಿಕೆ ಮುಖ್ಯ ಆಯುಕ್ತರು ತಿಳಿಸಿದ್ದಾರೆ.