ದೀಪಾವಳಿಗೆ ಹೀಗೆ ಮಾಡಿ ರಾಮನನ್ನು ಸಂತೋಷಪಡಿಸಿ ಎಂದ ಮೋದಿ
Thursday, October 7, 2021
ಲಕ್ನೋ/ ಉತ್ತರಪ್ರದೇಶ: ಉತ್ತರ ಪ್ರದೇಶದಲ್ಲಿ 9 ಲಕ್ಷ ಸರಕಾರದ ಫಲಾನುಭವಿಗಳಿದ್ದು, ಪ್ರತಿಯೊಬ್ಬ ಫಲಾನುಭವಿಯೂ ಎರಡೆರಡು ದೀಪಗಳನ್ನು ಬೆಳಗಿಸಿದರೆ ಭಗವಾನ್ ಶ್ರೀರಾಮನಿಗೆ ಸಂತೋಷವಾಗುತ್ತದೆ ಎಂದವರು ಹೇಳಿದ್ದಾರೆ.
ಪ್ರತೀ ಒಂಬತ್ತು ಲಕ್ಷ ಫಲಾನುಭವಿಗಳೂ ಒಟ್ಟುಗೂಡಿ ದೀಪ ಬೆಳಗಿಸುವ ಮೂಲಕ ಹಬ್ಬ ಆಚರಿಸಬೇಕಿದೆ ಎಂದು ಅವರು ಕರೆ ನೀಡಿದರು.
ಯುಪಿ ಸರಕಾರವು 7.5 ಲಕ್ಷ ಮಣ್ಣಿದ ದೀಪಗಳನ್ನು ಬೆಳಗಲು ಹೊರಟಿರುವುದು ಶ್ಲಾಘನೀಯ ಎಂದರು.
ಹಿಂದಿನ ಯುಪಿಎ ಸರಕಾರವು ಬಡವರ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಕಳಪೆ ಪ್ರದರ್ಶನ ಮಾಡಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.