ಭಾರತದಲ್ಲಿ ತಯಾರಾಗುತ್ತಿದೆ ಮಲೇರಿಯಾ ವ್ಯಾಕ್ಸಿನ್: ಇದು ವಿಶ್ವದಲ್ಲೇ ಮೊದಲು
Monday, October 11, 2021
ಹೈದರಾಬಾದ್: ಮಲೇರಿಯಾಕೆ ಲಸಿಕೆ ತಯಾರಾಗುತ್ತಿದೆ. ಅದು ಕೂಡಾ ಭಾರತದಲ್ಲಿ ಎಂಬುದು ಹೆಮ್ಮೆಯ ವಿಚಾರ.
ಮಲೇರಿಯಾ ನಿಯಂತ್ರಣದ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪೆನಿಯು ಲಸಿಕೆ ತಯಾರಿಗೆ ಸಿದ್ಧತೆ ನಡೆಸಿದೆ.
ಸುಮಾರು 8 ಲಕ್ಷ ವಿದ್ಯಾರ್ಥಿಗಳಿಗೆ ಈ ಡೋಸ್‌ನ್ನು ನೀಡಿ ಸಂಶೋಧನೆ ನಡೆಸಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ.
ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ತಯಾರಿಗೆ ಅನುಮತಿ ನೀಡಿದ್ದೂ, ಇದೀಗ ವಿಶ್ವದ ಚಿತ್ತ ಭಾರದತ್ತ ನೆಟ್ಟಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಂಸ್ಥೆಯ ಮುಖ್ಯಸ್ಥ ರೇಚಸ್ 'ಇಂಗ್ಲೆಂಡಿನ ಗ್ಲಾಕ್ಸೋಸ್ಮಿತ್‌ಕ್ಲೈನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಲಸಿಕೆ ಉತ್ಪಾದಿಸಲಿದ್ದೇವೆ. ವರ್ಷಕ್ಕೆ ಒಂದು ಕೋಟಿ ಮಲೇರಿಯಾ ಲಸಿಕೆ ಉತ್ಪಾದಿಸಬೇಕಾದ ಅಗತ್ಯವಿದೆ' ಎಂದಿದ್ದಾರೆ.