
ಯುವಕನಿಂದಲೇ ಯುವಕನ ಮೇಲೆ ರೇಪ್: ನಿರ್ಜನ ಪ್ರದೇಶದಲ್ಲಿ ನಡೆಯಿತು ಆ ಹೀನ ಕೃತ್ಯ
ಬೆಳಗಾವಿ: ಬಸ್‌ಗಾಗಿ ಕಾಯುತ್ತಿದ್ದ ಯುವಕನೊಬ್ಬನನ್ನು ಡ್ರಾಪ್ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅನೈಸರ್ಗಿಕ ಲೈಂಗಿಕ ಸಂಪರ್ಕ ನಡೆಸಿರುವ ಘಟನೆ ಜಿಲ್ಲೆಯ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕ ಬಸ್‌ಗಾಗಿ ಕಾಯುತ್ತಿದ್ದು, ಅದೇ ರಸ್ತೆಯಾಗಿ ಬೈಕ್ ಬಂದ ರಾಜು ನೀಲವ್ವ ಆಚಾರಟ್ಟಿ ಯುವನಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಬೈಕ್ ಹತ್ತಿಸಿದ್ದಾನೆ.
ಬಳಿಕ ಬೈಕನ್ನು ನಿರ್ಜನ ಪ್ರದೇಶಕ್ಕೆ ಕೊಂಡು ಹೋಗಿದ್ದು, ಅಲ್ಲಿ ಯುವಕನ ಇಚ್ಛೆಗೆ ವಿರುದ್ಧವಾಗಿ ಅನೈಸರ್ಗಿಕ ಲೈಂಗಿಕ ಸಂಪರ್ಕ ನಡೆಸಿದ್ದಾನೆ.
ಆಥಣಿ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.