ಶಾಲೆಗೆ ಹೋಗಲ್ಲ ಎಂದು ಮನೆಬಿಟ್ಟು ಹೋದ ಮಕ್ಕಳು: ಆನ್‌ಲೈನ್ ತರಗತಿಗಳು ಮಕ್ಕಳ ಓದಿನಲ್ಲಿ ಪರಿಣಾಮ ಬೀರಿತೇ?
Monday, October 11, 2021
ಬೆಂಗಳೂರು: ನಮಗೆ ಶಾಲೆ,ಪಾಠ, ಓದು ಏನೂ ಬೇಡ ಇದರಲ್ಲೇನೂ ನಮಗೆ ಆಸಕ್ತಿ ಇಲ್ಲ ಎಂದು ಎರಡು ಪ್ರಕರಣಗಳಲ್ಲಿ ಒಟ್ಟು ಏಳು ಮಂದಿ ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ನಡೆದಿದೆ.
ಬಾಗಲುಗುಂಟೆಯಲ್ಲಿ 15 ವರ್ಷದ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಇವರನ್ನು ಕಿರಣ್, ಪರೀಕ್ಷಿತ್, ನಂದನ್ ಎಂದು ಗುರುತಿಸಲಾಗಿದೆ.
ಅದೇ ರೀತಿ ಸೋಲದೇವನಹಳ್ಳಿಯಿಂದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಅವರನ್ನು ರಾಯನ್, ಸಿದ್ಧಾಂತ್, ಭುವಿ ಮತ್ತು ಚಿಂತನ್ ಎಂದು ಗುರುತಿಸಲಾಗಿದೆ.
ಇವರು ಮನೆಯಲ್ಲಿ ಪತ್ರವೊಂದನ್ನು ಬರೆದಿಟ್ಟು ನಾಪತ್ತೆಯಾಗಿದ್ದು, ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ನಮಗೆ ಆಟ ಆಡಬೇಕು. ಆಟ ಆಡಿ ನಾವು ಹೆಸರು ಮಾಡ್ತೀವಿ. ಹಾಗೇನೆ ಆಟ ಆಡಿ ಹಣವನ್ನು ಗಳಿಸ್ತೇವೆ ಎಂದು ಬರೆದಿದ್ದಾರೆಂದು ತಿಳಿದುಬಂದಿದೆ.
ಇದೀಗ ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದು, ತನಿಖೆ ಕೈಗೊಂಡಿದ್ದಾರೆ.