AICCಗೆ ಶೀಘ್ರದಲ್ಲೇ ನೂತನ ಅಧ್ಯಕ್ಷರ ನೇಮಕ?: ಅ. 16ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
Sunday, October 10, 2021
ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಅಕ್ಟೋಬರ್ 16ರಂದು ಕರೆಯಲಾಗಿದ್ದು, ಸದ್ಯದ ರಾಜಕೀಯ ಬೆಳವಣಿಗೆ, ಮುಂಬರುವ ಚುನಾವಣೆ ಹಾಗೂ ಎಐಸಿಸಿಗೆ ನೂತನ ಅಧ್ಯಕ್ಷರ ನೇಮಕ ಮೊದಲಾದ ವಿಚಾರವಾಗಿ ಚರ್ಚೆ ನಡೆಯಲಿದೆ.
ಸಭೆಯು ಬೆಳಗ್ಗೆ 10 ಗಂಟೆಗೆ ದಿಲ್ಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.
ಕಾಂಗ್ರೆಸ್‌ಗೆ ಪೂರ್ಣಾವಧಿ ಅಧ್ಯಕ್ಷರಿಲ್ಲದ ಕೊರತೆಯೂ ಈ ಸಭೆಯ ಬಳಿಕ ನೀಗಲಿದೆ ಎಂದು ಅಂದಾಜಿಸಲಾಗಿದೆ.