ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣ: ಪತಿಗೆ ಕೋರ್ಟ್ ನೀಡಿದ ಶಿಕ್ಷೆ ಏನು ಗೊತ್ತಾ?
Wednesday, October 13, 2021
ಕೊಲ್ಲಂ: ಲಕ್ಷಾಂತರ ರೂ. ಹಣ ಮತ್ತು ಚಿನ್ನಾಭರಣ ವರದಕ್ಷಿಣೆ ಪಡೆದು, ಕೊನೆಗೆ ಆಕೆಯನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವ ಪ್ರಕರಣ ಸಂಬಂಧ ತೀರ್ಪು ಹೊರಬಿದ್ದಿದ್ದು, ಪತಿ ಸೂರಜ್‌ಗೆ ಎರಡು ಬಾರಿ ಜೀವನ ಪರ್ಯಂತ ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿದೆ.
ಈ ಪ್ರಕರಣ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷ್ಯಗಳಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಕೊಲ್ಲಂ ಅಡೀಶನಲ್ ಕೋರ್ಟ್ ಈ ತೀರ್ಪು ನೀಡಿದೆ.
ಕೇವಲ ಒಂದುವರೆ ವರ್ಷದೊಳಗಾಗಿ ವಿಚಾರಣೆ ಮುಗಿದಿದ್ದು, ಪೊಲೀಸರ ತನಿಖಾ ಶೈಲಿಯ ಬಗ್ಗೆಯೂ ಶ್ಲಾಘನೆ ವ್ಯಕ್ತವಾಗಿದೆ.
ಏನಿದೆ ಘಟನೆ: 2020 ಮೇ 7ರಂದು ಉತ್ರಾ ಎಂಬ ಹೆಣ್ಣು ಮಗಳು ತನ್ನ ಪತಿ ಮನೆಯಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ್ದಳು. ಆದರೆ ಆಕೆಯ ಒಂದೂವರೆ ವರ್ಷದ ಮಗುವಿಗೆ ಏನೂ ಆಗಿರಲಿಲ್ಲ. ಇದರಿಂದ ಸಂದೇಹಗೊಂಡ ಉತ್ರಾ ಮನೆಯವರು ಪೊಲೀಸ್ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಪತಿ ಸೂರಜ್ ನಾಗರಹಾವನ್ನು ಬಾಡಿಗೆಗೆ ಪಡೆದು ಬೆಡ್‌ರೂಂ ನಲ್ಲಿ ಕಚ್ಚಿಸಿದ್ದ ಎಂಬ ಮಾಹಿತಿ ತಿಳಿದುಬಂದಿತ್ತು.
ಅದಕ್ಕಿಂತಲೂ ಮೊದಲು ಈ ಕೃತ್ಯ ನಡೆಸಿದ್ದು, ಅದರಲ್ಲಿ ಸೂರಜ್ ಯಶಸ್ಸು ಕಂಡಿರಲಿಲ್ಲ ಎಂದು ತಿಳಿದು ಬಂದಿದೆ.