ರೈಲಿನಲ್ಲಿ ಉಗುಳುತ್ತೀರಾ? ಇದರಿಂದ ರೈಲ್ವೇ ಇಲಾಖೆಗೆ ಆಗುವ ನಷ್ಟ ಎಷ್ಟು ಗೊತ್ತಾ?
Wednesday, October 13, 2021
ನವದೆಹಲಿ: ನೀವು ರೈಲಿನಲ್ಲಿ ತಂಬಾಕು ಉತ್ಪನ್ನಗಳನ್ನು ಜಗಿದು ಉಗುಳುತ್ತೀರಾ? ಹಾಗಾದರೆ ಈ ಸುದ್ದಿ ಓದಿ. ಈ ರೀತಿಯಾಗಿ ನೀವು ಉಗುಳಿದ ಕಲೆಗಳನ್ನು ಸ್ವಚ್ಛ ಗೊಳಿಸಲು ಭಾರತೀಯ ರೈಲ್ವೆ ಯು ಸುಮಾರು 1200 ಕೋಟಿ ರೂಪಾಯಿ ಯನ್ನು ವರ್ಷವೊಂದಕ್ಕೆ ವ್ಯಯಿಸುತ್ತದೆ.
ಈ ನಿಟ್ಟಿನಲ್ಲಿ ರೈಲಿನಲ್ಲಿ ಮತ್ತು ರೈಲು ನಿಲ್ದಾಣದಲ್ಲಿ ಉಗುಳುವುದನ್ನು ತಡೆಯುವ ಸಲುವಾಗಿ ಸ್ಪಿಟ್ಟಿಂಗ್ ಪೌಚ್‌ನ್ನು ಒದಗಿಸುವ ಯೋಜನೆ ಹಾಕಿಕೊಂಡಿದೆ.
ವೆಂಡಿಂಗ್ ಮೆಶಿನ್ ಮೂಲಕ ಈ ಪೌಚ್ ರೈಲು ನಿಲ್ದಾಣಗಳಲ್ಲಿ ದೊರೆಯಲಿದ್ದು, ಐದು ಇಲ್ಲವೇ ಹತ್ತು ರೂ.ಗೆ ಈ ಪೌಚ್ ದೊರೆಯಲಿದೆ.
ಇದನ್ನು ಸುಮಾರು 10 ಬಾರಿಯಷ್ಟು ಬಳಸಬಹುದಾಗಿದ್ದು, ಬಳಿಕ ಎಸೆಯಬೇಕು.
ಈಗಾಗಲೇ ಹಲವು ರೈಲು ನಿಲ್ದಾಣಗಳಲ್ಲಿ ಈ ವೆಂಡಿಂಗ್ ಮೆಶಿನ್ ಅಳವಡಿಸಲಾಗಿದೆ. ಕಂಟೇನರ್ ಮತ್ತು ಪೌಚ್ ರೂಪದಲ್ಲಿ ದೊರೆಯುವ ಈ ಪೌಚ್‌ನ್ನು ಸುಲಭವಾಗಿ ಹೊತ್ತೊಯ್ಯಬಹುದಾಗಿದೆ.