
ಸ್ಥಳೀಯ ಆಡಳಿತ ಚುನಾವಣೆಯಲ್ಲಿ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ
ಚೆನ್ನೈ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರೊಬ್ಬರು ಇದೀಗ ಕೇವಲ ಒಂದು ಓಟು ಪಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದಾರೆ.
ಬಿಜೆಪಿ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಕಾರ್ತಿಕ್ ಡಿ ಕೋಯಂಬತ್ತೂರು ಜಿಲ್ಲೆಯ ಕುರುಡಂಪಾಳ್ಯ ಪಂಚಾಯತ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರ ಕುಟುಂಬದಲ್ಲಿ ಇವರು ಸಹಿತ ಐವರು ಮತದಾರರಿದ್ದರೂ ಅವರಿಗೆ ದೊರಕಿರುವುದು ಒಂದು ವೋಟು ಮಾತ್ರ.
ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೆ ಈಡಾಗಿದೆ.
"ನಾನು ಬಿಜೆಪಿಯಿಂದ ಸ್ಪರ್ಧಿಸಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ. ನನ್ನ ಕುಟುಂಬದ ಸದಸ್ಯರಿಗೆ ನಾನು ನಿಂತ ವಾರ್ಡ್ ನಲ್ಲಿ ಮತ ಇಲ್ಲ" ಎಂದು ಕಾರ್ತಿಕ್ ಡಿ ಸಮಜಾಯಿಷಿ ನೀಡಿದ್ದಾರೆ.