ಮಹಿಳೆಯರ toiletನಲ್ಲಿ ರಹಸ್ಯ ಕ್ಯಾಮರಾ ಇಟ್ಟು ರೆಕಾರ್ಡಿಂಗ್: ಈ ಕಾಮುಕನ ಮೊಬೈಲ್ ನಲ್ಲಿದೆ ಹಲವು ಯುವತಿಯರ Video
Thursday, October 21, 2021
ತುಮಕೂರು: ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಅವರ ಖಾಸಗಿ ಕ್ಷಣದ ವೀಡಿಯೋಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಕಾಮುಕನನ್ನು ಜನರು ಸೆರೆ ಹಿಡಿದಿದ್ದು, ಚೆನ್ನಾಗಿ ಬಿಗಿದು ಇದೀಗ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಲ್ಲಿನ ಗಾಂಧಿನಗರದಲ್ಲಿರುವ ವಿಶ್ವಗುರು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಕಳೆದ ಒಂದು ವರ್ಷಗಳಿಂದ ಸ್ವಚ್ಛತಾ ಕೆಲಸ ಮಾಡುತ್ತಿರುವ ಚಾಮರಾಜನಗರ ಜಿಲ್ಲೆಯ ಹರೀಶ್ (35) ನೀಚ ಕೃತ್ಯ ಎಸಗಿ ಸಾರ್ವಜನಿಕರ ಕೈಗೆ ಸೆರೆಸಿಕ್ಕಿದಾತ.
ಈತ ಮಹಿಳೆಯರ ಶೌಚಗೃಹದ ಗೋಡೆಯ ಮೇಲೆ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ. ಶೌಚಾಲಯಕ್ಕೆ ತೆರಳಿದ್ದ ಮಹಿಳೆಯೊಬ್ಬರು ಅನುಮಾನದಿಂದ ಗೋಡೆಯ ಮೇಲಿದ್ದ ಮೊಬೈಲ್ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ತಕ್ಷಣವೇ ಆತನನ್ನು ಸೆರೆಹಿಡಿದ ಇತರ ಸಿಬ್ಬಂದಿ ಮತ್ತು ಸಾರ್ವಜನಿಕರು ಥಳಿಸಿದ್ದಾರೆ. ಈತನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಹಲವು ಮಹಿಳೆಯರ ವೀಡಿಯೋ ಕಂಡು ಬಂದಿತ್ರು ಎಂದು ತಿಳಿದುಬಂದಿದೆ.
ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.