ಇವನೆಂತಾ ಪುಣ್ಯಾತ್ಮ? ! ಏನಾಗುತ್ತೇ ನೋಡೇ ಬಿಡೋಣ ಎಂದು ಮೊಬೈಲ್ ನುಂಗಿಬಿಟ್ಟ
Wednesday, October 20, 2021
ಕೈರೋ: ಮೊಬೈಲ್ ನುಂಗಿದ್ರೆ ಏನಾಗುತ್ತೆ ನೋಡೇ ಬಿಡೋಣ ಎಂದು ಯುವಕನೋರ್ವ ಮೊಬೈಲ್ ನುಂಗಿ ಪಜೀತಿಗೆ ಸಿಲುಕಿರುವ ಘಟನೆ ಈಜಿಪ್ಟಿನ ರಾಜಧಾನಿ ಕೈರೋದಲ್ಲಿ ನಡೆದಿದೆ.
ಮೊಬೈಲ್ ನುಂಗಿದರೆ ಮಲ ವಿಸರ್ಜನೆ ವೇಳೆ ಅದು ಹೊರಬರಬಹುದು ಎಂದು ನಂಬಿದ್ದ 33 ವರ್ಷದ ಯುವಕ, ಮೊಬೈಲ್ ನುಂಗಿದ ಬಳಿಕ ಪೇಚಿಗೆ ಸಿಲುಕಿದ್ದಾನೆ.
ಮೊಬೈಲ್ ಹೊಟ್ಟೆ ಸೇರಿದ ಬಳಿಕ ಅತ್ತ ಕುಡಿಯಲೂ, ತಿನ್ನಲೂ ಆಗದೇ ತೊಂದರೆ ಅನುಭವಿಸಿದ್ದಲ್ಲದೇ, ಆತನಲ್ಲಿ ಹೊಟ್ಟೆ ನೋವೂ ಕಾಣಿಸಿಕೊಂಡಿದೆ. ಹೀಗಾಗಿ ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಬಂದಿದ್ದಾನೆ.
ವೈದ್ಯರು ತಕ್ಷಣವೇ ಆಪರೇಷನ್ ಗೆ ಮುಂದಾಗಿದ್ದು, ಎರಡು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಂತರ ಫೋನ್ ಅನ್ನು ಹೊರತೆಗೆದಿದ್ದಾರೆ.