ವಿಚ್ಛೇದನಕ್ಕೆ ಕಾರಣವಾಯಿತಾ ಮಹಿಳಾ ಉದ್ಯೋಗಿಗೆ ಬಿಲ್ ಗೇಟ್ಸ್ ಕಳಿಸಿದ ಆ e-mail ಮೆಸೇಜ್
Wednesday, October 20, 2021
ರೆಡ್ಮಂಡ್: ಬಿಲ್‌ಗೇಟ್ಸ್ ತನ್ನ ಮಹಿಳಾ ಸಹೋದ್ಯೋಗಿಗೆ ಚೆಲ್ಲಾಟದ e-mail ಕಳಿಸಿರುವುದನ್ನು ಪತ್ತೆಹಚ್ಚಿರುವ ಮೈಕ್ರೋಸಾಫ್ಟ್ ಕಂಪನಿಯು, ಈ ಹಿನ್ನೆಲೆಯಲ್ಲಿ ಅವರ ಬಳಿ ವಿವರಣೆ ಕೇಳಿದೆ.
ಅಸಮಂಜಸ ಇಮೇಲ್ ಕಳಿಸಿದ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಆಡಳಿತ ಮಂಡಳಿಯ ಪ್ರಮುಖ ಕೆಲ ಸದಸ್ಯರು ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಬಿಲ್ ಗೇಟ್ಸ್ ಅವರೇ ಒಪ್ಪಿಕೊಂಡಂತೆ ಗೇಟ್ಸ್ ಮಹಿಳಾ ಸಹೋದ್ಯೋಗಿಗೆ ಈ ಮೇಲ್ ಸಂದೇಶವನ್ನಷ್ಟೇ ಕಳಿಸಿದ್ದಾರೆ ಹೊರತು, ಇತರ ಯಾವುದೇ ರೀತಿಯಾಗಿ ಸಂಪರ್ಕ ಇಟ್ಟುಕೊಂಡಿರಲಿಲ್ಲ.
ಇದು 20 ವರ್ಷ ಹಿಂದಿನ ಪ್ರಕರಣವಾಗಿದ್ದು, 2008ರಲ್ಲೇ ಮೈಕ್ರೋಸಾಫ್ಟ್ ಗೇಟ್ಸ್ ಗೆ ಎಚ್ಚರಿಕೆ ನೀಡಿತ್ತಂತೆ
ಇನ್ನು ಈ ಆರೋಪಗಳನ್ನು ಬಿಲ್‌ಗೇಟ್ಸ್ ಅವರ ಖಾಸಗಿ ಕಚೇರಿ ನಿರಾಕರಿಸಿದೆ. ಅದಾಗ್ಯೂ ಪ್ರಕರಣದ ಹಿನ್ನೆಲೆಯಲ್ಲಿ ಬಿಲ್ ಗೇಟ್ಸ್ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.