ಈ ಏರ್‌ಪೋರ್ಟ್ ನಲ್ಲಿ ಹಂದಿಗಳೂ ಉದ್ಯೋಗ ನಿರತವಾಗಿದೆ! ಅದೂ ಕೂಡಾ Runwayಯಲ್ಲಿ
Wednesday, October 20, 2021
ನೆದರ್‌ಲ್ಯಾಂಡ್ಸ್: ಇಲ್ಲಿನ ಏರ್‌ಪೋರ್ಟ್ ಒಂದರಲ್ಲಿ ಸುಮಾರು 20ರಷ್ಟು ಹಂದಿಗಳು ಉದ್ಯೋಗ ನಿರತವಾಗಿದೆ. ಅದು ಕೂಡಾ ಹಂದಿಗಳಿಗೆ ಕೆಲಸ ಇರುವುದು ರನ್‌ವೇಯಲ್ಲಿ. ನಿಮಗೆ ಅಚ್ಚರಿಯಾದರೂ ಇದೊಂದು ವಿಚಿತ್ರ ಸತ್ಯ.
ಯುರೋಪ್'ನ 3ನೇ ಅತಿದೊಡ್ಡ ಏರ್ಪೋರ್ಟ್' ನೆದರ್ಲ್ಯಾಂಡ್ ಆಂಸ್ಟರ್ಡ್ಯಾಮ್ ಸ್ಕಿಫೋಲ್ ವಿಮಾನ ನಿಲ್ದಾಣದಲ್ಲಿ ಹೆಬ್ಬಾತುಗಳ ಹಾವಳಿ ಹೆಚ್ಚಾಗಿತ್ತು. ಇದರಿಂದ ವಿಮಾನ ಲ್ಯಾಂಡಿಂಗ್ ಮತ್ತು ಟೇಕಾಫ್‌ಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು.
ಈ ಸಮಸ್ಯೆ ಯಿಂದ ಪಾರಾಗಲು ವಿಮಾನ ನಿಲ್ದಾಣ ಪ್ರಾಧಿಕಾರ ಕಂಡುಕೊಂಡ ಉಪಾಯವೇ ಹಂದಿಗಳನ್ನು ರನ್‌ವೇಯಲ್ಲಿ ಕಾವಲು ನಿಲ್ಲಿಸುವುದು
ರನ್ ವೇ ಮಧ್ಯ ಇರುವ ಪ್ರದೇಶದಲ್ಲಿ ಹಂದಿಗಳನ್ನು ಬಿಡಲಾಗಿದ್ದು, ಅವು ಅತ್ತಿಂದಿತ್ತ ಗಸ್ತು ತಿರುಗಿದಂತೆ ಓಡಾಡುತ್ತಿವೆ. ಇದರಿಂದಾಗಿ ಹೆಬ್ಬಾತುಗಳು ರನ್‌ವೇಗೆ ಬರುದು ಕಡಿಮೆ ಆಗಿದೆ. ಸುಮಾರು 20 ಹಂದಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ.