ನಳಿನ್ ಕುಮಾರ್ ಜೋಕರ್ ಮಾತ್ರ ಅಲ್ಲ, ಒಬ್ಬ ಅವಿವೇಕಿ: ಹೇಳಿದ್ದು ಯಾರು ಗೊತ್ತೇ
Wednesday, October 20, 2021
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್, ನಳಿನ್ ಕುಮಾರ್ ಒಬ್ಬ ಸಂಸ್ಕಾರ ಇಲ್ಲದ ವ್ಯಕ್ತಿ. ಜೋಕರ್ ತರ ವರ್ತಿಸುವ ಅವರೊಬ್ಬರು ಅವಿವೇಕಿ. ಬಹುಶಃ ನಳಿನ್ ಕುಮಾರ್‌ಗೆ ಡ್ರಗ್ಸ್ ತಗೊಳ್ಳುವ ಅಭ್ಯಾಸ ಇರಬೇಕು. ಆ ನಶೆಯಲ್ಲಿಯೇ ಅವರು ಈ ರೀತಿ ಮಾತನಾಡುತ್ತಿರಬೇಕು ಎಂದಿದ್ದಾರೆ.
ಸಂಸ್ಕೃತಿ ಮತ್ತು ಸಭ್ಯತೆಯ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರೇ ಈ ರೀತಿ ಅಸಭ್ಯವಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಅವರು ನೀಡಿರುವ ಹೇಳಿಕೆ ಅತ್ಯಂತ ಕೀಳುಮಟ್ಟದ್ದು, ಮತ್ತು ಆಧಾರ ರಹಿತ ಎಂದು ಹೇಳಿದ್ದಾರೆ.
ಬಿಜೆಪಿ ಹಿರಿಯರು ನಳಿನ್ ಕುಮಾರ್ ಗೆ ಬುದ್ದಿ ಹೇಳಬೇಕಿದೆ ಎಂದವರು ಆಗ್ರಹಿಸಿದ್ದಾರೆ.