ಬೆಳಗಾವಿಗೂ ವ್ಯಾಪಿಸಿದ ಅನೈತಿಕ ಪೊಲೀಸ್‌ಗಿರಿ
ಬೆಳಗಾವಿ: ಪರಸ್ಪರ ಮಾತನಾಡುತ್ತಿದ್ದ ವಿಭಿನ್ನ ಕೋಮಿಗೆ ಸೇರಿದ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ಮಾಡುವ ಕಾರ್ಯಕರ್ತರ ತಂಡ ಹಲ್ಲೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪರಸ್ಪರ ಮಾತನಾಡುತ್ತಿದ್ದರು.
ಇದನ್ನು ಗಮನಿಸಿದ ಯುವಕರ ಗುಂಪೊಂದು ವಿದ್ಯಾರ್ಥಿಗಳ ಬಳಿ ಬಂದು ಅವರನ್ನು ಪ್ರಶ್ನಿಸಿದ್ದಲ್ಲದೇ ವಿದ್ಯಾರ್ಥಿ ಮೇಲೆ ಹಲ್ಲೆಗೂ ಯತ್ನಿಸಿದ್ದರು.
ಅಷ್ಟೇ ಅಲ್ಲದೇ ದುಷ್ಕರ್ಮಿಗಳು ಯುವತಿಯರು ಮುಖಕ್ಕೆ ಕಟ್ಟಿದ ಬಟ್ಟೆ ಬಿಚ್ಚಿಸಿ, ಹೆಸರೇನು -ವಿಳಾಸ ಕೇಳಿದ್ದಾರೆ. ವಿದ್ಯಾರ್ಥಿಗಳು ನಾವು ಕಾಲೇಜು ಸ್ನೇಹಿತರು ಎಂದು ಅಂಗಲಾಚಿದ್ರೂ ನೈತಿಕ ಪೊಲೀಸರು ಕರುಣೆ ತೋರಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಕುರಿತಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ