ಫ್ರೀ ಗಿಫ್ಟ್ ಆಮಿಷಕ್ಕೆ ಬಲಿಯಾಗಬೇಡಿ: online ವಂಚಕರು ಕಳಿಸುವ ಲಿಂಕ್ ಒತ್ತಲೇಬೇಡಿ
Tuesday, October 19, 2021
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚಕರ ಹಾವಳಿ ಜಾಸ್ತಿ ಆಗತೊಡಗಿದೆ. ಈ ಆನ್‌ಲೈನ್ ವಂಚಕರದ್ದು ವಿವಿಧ ಶೈಲಿ. ಕೆಲವರು ಲಿಂಕ್ ಕಳಿಸಿ ಒತ್ತಲು ಹೇಳಿದ್ರೆ ಇನ್ನು ಕೆಲವರು ಕರೆ ಮಾಡಿ ಒಟಿಪಿ ಕೇಳೋದು. ಅಂತೂ ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನು ನುಂಗುದೇ ಈ ಖದೀಮರ ಗುರಿ.
ಆನ್‌ಲೈನ್ ವಂಚಕರ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದ್ದರೂ, ಅನೇಕ ಘಟನುಘಟಿಗಳೇ ಬಲಿಯಾಗುದಕ್ಕೆ ಇತ್ತೀಚೆಗೆ ಹಣ ಕಳೆದುಕೊಂಡ, ನಿವೃತ್ತ ಡಿಜಿಪಿ ಉದಾಹರಣೆ.
ಇದೀಗ ಖುದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೇ ಜಾಗೃತರಾಗುವಂತೆ ಟ್ವೀಟ್ ಮಾಡಿದೆ.
ಇತ್ತೀಚೆಗೆ ಲಿಂಕ್ ಒಂದನ್ನು ಕಳಿಸಿ ಅದನ್ನು ಒತ್ತುವಂತೆ ಸೂಚಿಸಿದ್ದು, ಲಿಂಕ್ ಕ್ಲಿಕ್ ಮಾಡಿದವರು ಹಣ ಕಳೆದುಕೊಂಡ ನಿದರ್ಶನವೇ ಜಾಸ್ತಿ.
ಹ್ಯಾಕರ್ ಗಳು ನಕಲಿ ಸಂದೇಶಗಳನ್ನು ಕಳುಹಿಸುವ ಮೂಲಕ ನಿಮ್ಮ ಖಾತೆಯನ್ನು ಖಾಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಸಿದ್ದೂ, ಅಂತಹ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಎಸ್ ಬಿಐ ಹೇಳಿದೆ, 'ನೀವು ಅಂತಹ ಲಿಂಕ್ ಗಳನ್ನು ಪಡೆಯುತ್ತೀರಾ?' ಅವರಿಂದ ದೂರವಿರಿ! ಈ ಫಿಶಿಂಗ್ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ನಾಶಪಡಿಸಬಹುದು. ಆದ್ದರಿಂದ ಜಾಗರೂಕರಾಗಿರಿ. ಕ್ಲಿಕ್ ಮಾಡುವ ಮೊದಲು ಯೋಚಿಸಿ' ಎಂದು ಎಸ್‌ಬಿಐ ಟ್ವೀಟ್ ಮಾಡಿದೆ.