
Hernia ಆಪರೇಷನ್ ವೇಳೆ ನನ್ನ 'ಆ' ಭಾಗಕ್ಕೆ ಗಾಯ: ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ
ಚಿಕ್ಕಮಗಳೂರು: ಹರ್ನಿಯಾ (ವೃಷಣಗಳು ಬಾತಕೊಳ್ಳುವುದು) ಆಪರೇಶನ್ ವೇಳೆ ವೈದ್ಯರು ನಿರ್ಲಕ್ಷ್ಯ ತೋರಿದ್ದು, ಇದರಿಂದ ನನ್ನ ಖಾಸಗಿ ಅಂಗಕ್ಕೆ ಗಾಯವಾಗಿದೆ ಎಂದು ಯುವಕನೋರ್ವ ಪೊಲೀಸರಿಗೆ ದೂರು ನೀಡಿದ್ದಾನೆ.
ಜಿಲ್ಲೆಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಹರ್ನಿಯಾ (ವೃಷಣಗಳು ಬಾತಕೊಳ್ಳುವುದು) ಆಪರೇಷನ್ ಗೆಂದು ಸಕಲೇಶಪುರದ ಯೋಗೇಂದ್ರ ಎಂಬವರು ದಾಖಲಾಗಿದ್ದರು.
ಆಪರೇಷನ್ ವೇಳೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು, ನನ್ನ ಖಾಸಗಿ ಅಂಗಕ್ಕೆ ಪೈಪನ್ನ ಚುಚ್ಚಿ ತೀವ್ರವಾಗಿ ಗಾಯಗೊಳಿಸಿದ್ದು, ನನ್ನ ಖಾಸಗಿ ಅಂಗದಲ್ಲಿ ಊತ ಕಾಣಿಸಿಕೊಂಡಿದ್ದು ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಂದೆ ನನ್ನ ಜೀವನ ಅಥವಾ ಜೀವಕ್ಕೆ ತೊಂದರೆಯಾದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳೇ ಜವಾಬ್ದಾರರು ಯೋಗೇಂದ್ರ ಹೇಳಿದ್ದಾರೆ.