ಮಕ್ಕಳೇ ಇನ್ನು ನೀವು ಆದಿತ್ಯವಾರವೂ ಶಾಲೆಗೆ ಹೋಗ್ಬೇಕು: ಯಾಕೆ ಅಂತ ಸಚಿವರೇ ಹೇಳ್ತಾರೆ ನೋಡಿ
Sunday, October 17, 2021
ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ವರ್ಷಾನುಗಟ್ಟಲೆ ಶಾಲೆಗಳು ಮುಚ್ಚಲ್ಪಟ್ಟದ್ದರಿಂದ ಇದೀಗ ಅಧ್ಯಾಪಕರಿಗೆ ಸಿಲೆಬಸ್ ಕಂಪ್ಲೀಟ್ ಮಾಡುವುದೇ ದೊಡ್ಡ ಸಮಸ್ಯೆ ಯಾಗಿದೆ.
ಆದರೆ ಕಳೆದ ಬಾರಿ ಪಠ್ಯ ಕ್ರಮ ಕಡಿತಗೊಳಿಸಿ ಸಮತೋಲನ ಮಾಡಲಾಗಿತ್ತು.
ಆದರೆ ಈ ಬಾರಿ ಪಠ್ಯಕ್ರಮ ಕಡಿತ ಮಾಡುವ ಆಲೋಚನೆ ಇಲ್ಲವೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಶನಿವಾರ ಮತ್ತು ಆದಿತ್ಯವಾರ ಕೂಡಾ ಶಾಲೆಗಳನ್ನು ನಡೆಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಚಿಂತಿಸುತ್ತಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಪಠ್ಯ ಕ್ರಮ ಕಡಿತ ಮಾಡಲ್ಲ ಎಂದಿದ್ದಾರೆ.