Kerala ಭೀಕರ ಪ್ರವಾಹ: ತೊಟ್ಟಿಲಿನಲ್ಲಿ ಮಲಗಿದ ಸ್ಥಿತಿಯಲ್ಲೇ ಮಗುವಿನ ಮೃತದೇಹ ಪತ್ತೆ: ಐದು ಮಕ್ಕಳು ಸಹಿತ ಏಳು ಮಂದಿ ಭೂಕುಸಿತಕ್ಕೆ ಬಲಿ
Sunday, October 17, 2021
ಇಡುಕ್ಕಿ: ಕೇರಳದಲ್ಲಿ ಸುರಿಯುತ್ತಿರುವ ಭೀಕರ ಮಳೆ ಹಲವು ಜೀವ ಹಾನಿಗೆ ಕಾರಣವಾಗಿದೆ.
ಆದರೆ ಇಡುಕ್ಕಿ ಜಿಲ್ಲೆಯ ಕೊಕ್ಕೆಯಾರ್‌ನ ಘಟನೆ ಎಂತಹ ಕಲ್ಲು ಹೃದಯವನ್ನೂ ಕರಗಿಸಬಹುದು.
ಭೀಕರ ಮಳೆಗೆ ಕೊಕ್ಕೆಯಾರ್‌ನಲ್ಲಿ ಭಾರೀ ಪ್ರವಾಹ ಬಂದಿದ್ದು, ಭೂಕುಸಿತಕ್ಕೆ ಏಳು ಮನೆಗಳು ಕೊಚ್ಚಿ ಹೋಗಿದೆ.
ಭೂಸಮಾಧಿಯಾದವರ ಪೈಕಿ ಝಿಯಾದ್ ಎಂಬವರ ಇಬ್ಬರು ಮಕ್ಕಳು ಸಹಿತ ಐವರು ಕುಟುಂಬದ ಸದ್ಯರು ಇದ್ದರು. ಸದ್ಯ ಆರು ಜನರ ಮೃತದೇಹ ಪತ್ತೆಯಾಗಿದ್ದು, ಮೂರುವರ್ಷದ ಒಂದು ಮಗುವಿಗಾಗಿ ಹುಡುಕಾಟ ಮುಂದುವರಿದಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ ಒಂದು ಮಗುವಿನ ಮೃತದೇಹ ತೊಟ್ಟಿನಲ್ಲೇ ಪತ್ತೆಯಾಗಿದ್ದು, ಇನ್ನಿಬ್ಬರು ಮಕ್ಕಳು ಪರಸ್ಪರ ಅಪ್ಪಿ ಹಿಡಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ದೃಶ್ಯ ಗಳು ರಕ್ಷಾ ಕಾರ್ಯಕರ್ತರು ಮತ್ತು ನೆರೆದವರ ಕಣ್ಣಂಚಲ್ಲಿ ನೀರು ತರಿಸಿತ್ತು.
ದುರ್ಘಟನೆಗೂ ಮುನ್ನ ಮಕ್ಕಳು ತೆಗೆದ ವೀಡಿಯೋ ನೋಡಿ ನನ್ನ ಮಕ್ಕಳು ತಿರುಗಿ ಬರುವರೇ ಎಂದು ಬದುಕುಳಿದ ಝಿಯಾದ್ ಎಂಬಾತ ಕೇಳುತ್ತಿರುವುದು ನೆರೆದವರ ಕಣ್ಣಲ್ಲಿ ಮತ್ತಷ್ಟು ನೀರು ತರಿಸಿತ್ತು.