ಈಡೇರದ ಬಹುಕಾಲದ ಬೇಡಿಕೆ: ಸರಕಾರದ ಗಮನ ಸೆಳೆಯಲು ಈ ಯುವಕರು ಮಾಡಿದ ತಂತ್ರ ಏನು ಗೊತ್ತಾ?
Sunday, October 17, 2021
ಪುತ್ತೂರು: ನಿತ್ಯ ಸಂಚಾರಕ್ಕಾಗಿ ಕಷ್ಟ ಪಡುತ್ತಿರುವ ತಮ್ಮೂರಿನ ಜನತೆಗೆ ಒಂದು ಸೇತುವೆಯ ಬೇಡಿಕೆ ಇಟ್ಟು ಬಹುಕಾಲ ಕಳೆದರೂ ಇನ್ನೂ ಸೇತುವೆಯ ಆಗದ ಹಿನ್ನೆಲೆಯಲ್ಲಿ ಮೂವರು ಯುವಕರು ಸೇರಿ ಸಣ್ಣ ಬೋಟ್ ಒಂದನ್ನು ತಯಾರಿಸುವ ಮೂಲಕ ಸರಕಾದ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಇಲ್ಲಿನ ವೀರಮಂಗಳದ ಜಮಾಲ್, ಅಶ್ರಫ್ ಮತ್ತು ರಶೀದ್ ಎಂಬವರು ಸೇರಿ ಹಳೇ ಬ್ಯಾರಲ್ ರೀಪು ಮತ್ತು ಪಿವಿಸಿ ಪೈಪ್ ಉಪಯೋಗಿಸಿ ಸಣ್ಣ ಬೋಟ್ ಒಂದನ್ನು ನಿರ್ಮಿಸಿದ್ದು, ಇದೀಗ ಎಲ್ಲರ ಗಮನ ಸೆಳೆಯತೊಡಗಿದೆ.
ಪುತ್ತೂರು ತಾಲೂಕಿನ ಆತೂರು ಮತ್ತು ಕುದ್ಲೂರಿನ ಜನ ಪುತ್ತೂರು ನಗರ ಅಥವಾ ವೀರಮಂಗಳಕ್ಕೆ ಬರಲು ಸುಮಾರು 35 ಕಿಲೋಮೀಟರ್ ಸುತ್ತಿಬಳಸಿ ಬರಬೇಕು. ಆದರೆ ಇಲ್ಲಿ ಹರಿಯುವ ಕುಮಾಧಾರಾ ನದಿಗೆ ಸೇತುವೆ ನಿರ್ಮಿಸಿದರೆ ಈ ರೀತಿಯಾಗಿ ಸುತ್ತು ಬಳಸಿ ಬರುವುದನ್ನು ತಡೆಯ ಬಹುದು. ಈ ನಿಟ್ಟಿನಲ್ಲಿ ಗ್ರಾಮದ ಜನತೆ ಆತೂರು ಮತ್ತು ವೀರಮಂಗಳ ಸಂಪರ್ಕಿಸಲು ಸೇತುವೆಯ ಬೇಡಿಕೆ ಇಟ್ಟಿದ್ದರು. ಇಲ್ಲಿತನ ಅವರ ಬೇಡಿಕೆ ಈಡೇರಿಲ್ಲ.
ಆತೂರು ಮತ್ತು ಕುದ್ಲೂರಿನಲ್ಲಿ ಸುಮಾರು 500ರಷ್ಟು ಮನೆಗಳಿದ್ದು, ಶಾಲೆ, ಆರೋಗ್ಯ ಮತ್ತಿತರ ವಿಚಾರವಾಗಿ ಅವರು ವೀರಮಂಗಳಕ್ಕೆ ಬರುತ್ತಾರೆ. ಆದರೆ ರಸ್ತೆ ಮೂಲಕ ಸುತ್ತಿ ಬಳಸಿ ಬರುತ್ತಿದ್ದು, ಬಹಳಷ್ಟು ಕಷ್ಟದಾಯಕವಾಗಿದೆ.
ಮನಗಂಡ ಯುವಕರು ಸ್ವತಹ ತಾವೇ ಸಣ್ಣ ಬೋಟ್ ನಿರ್ಮಿಸುವ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.