
ತನ್ನ ಬಟ್ಟೆ ಅಂಗಡಿ ಪ್ರಚಾರಕ್ಕಾಗಿ ಆಫರ್ ನೀಡಿ ತಗಲಾಕ್ ಕೊಂಡ ವ್ಯಾಪಾರಿ
ತಮಿಳುನಾಡು: ತನ್ನ ಬಟ್ಟೆ ಅಂಗಡಿಯ ಪ್ರಚಾರಕ್ಕಾಗಿ ಸೀರೆಗಳ ಮೇಲೆ ವಿಶೇಷ ಆಫರ್ ನೀಡಿದ್ದ ವ್ಯಾಪಾರಿ ಈಗ ನಿಯಮ ಪಾಲಕರ ಕೈಯಲ್ಲಿ ಸಿಕ್ಕಾಕಿಕೊಂಡಿದ್ದಾನೆ.
ತಮಿಳುನಾಡಿನ ತೆಂಕಾಸಿಯ ವ್ಯಾಪಾರಿ ಒಬ್ಬ ತನ್ನ ಮಳಿಗೆಯ ಪ್ರಚಾರಕ್ಕಾಗಿ ಸೀರೆಯೊಂದಕ್ಕೆ ಕೇವಲ 50 ರೂ ಆಫರ್ ಘೋಷಿಸಿದ್ದ. ಇದರಿಂದ ಆತನ ಅಂಗಡಿ ಮುಂದೆ ಸುಮಾರು 5 ಸಾವಿರದಷ್ಟು ಮಹಿಳೆಯರು ಸೇರಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದಕ್ಕೆ ಅಂಗಡಿ ಮಾಲಕನಿಗೆ 10 ಸಾವಿರ ರೂ ದಂಡ ವಿಧಿಸಿದ್ದಾರೆ.
ಸುತ್ತಮುತ್ತಲಿನ ಹಳ್ಳಿಗಳ 5,000 ಕ್ಕೂ ಹೆಚ್ಚು ಮಹಿಳೆಯರು ಬೆಳಗ್ಗೆಯೇ ಅಂಗಡಿಗೆ ಬಂದಿದ್ದಾರೆ. ಇವರಲ್ಲಿ ಯಾರೂ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಿರಲಿಲ್ಲ.