ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಈ ಪೆಟ್ರೋಲ್ ಬಂಕ್ ಮಾಲಿಕ ಮಾಡಿದ್ದೇನು ಗೊತ್ತಾ?
Saturday, October 16, 2021
ಮಧ್ಯಪ್ರದೇಶ: ಮನೆಯಲ್ಲಿ ತನ್ನ ತಂಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಖುಷಿಯಿಂದ ಪೆಟ್ರೋಲ್ ಪಂಪ್ ಮಾಲಕನೊಬ್ಬ ತನ್ನ ಪಂಪ್ ಗೆ ಪೆಟ್ರೋಲ್ ಹಾಕಿಸಲು ಬರುವ ಗ್ರಾಹಕರಿಗೆ ಹೆಚ್ಚುವರಿ ಪೆಟ್ರೋಲ್‌ನ್ನು ಉಚಿತವಾಗಿ ನೀಡಿದ್ದಾನೆ.
ಮಧ್ಯಪ್ರದೇಶದ ಬೆಟುಲ್ ಜಿಲ್ಲೆಯ ಪೆಟ್ರೋಲ್ ಬಂಕ್ ಮಾಲೀಕ ದೀಪಕ್ ಸೈನಾನಿ ತಂಗಿ ಸಿಖಾ ಅಕ್ಟೋಬರ್ 9 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಈ ಖುಷಿಯಿಂದ ಸೈನಾನಿ, ನವರಾತ್ರಿ ಹಬ್ಬದ ಅಷ್ಟಮಿ, ನವಮಿ ಮತ್ತು ದಸರೆಯ ದಿನಗಳಂದು (ಅಕ್ಟೋಬರ್ 13,14 ಮತ್ತು 15) ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಪೆಟ್ರೋಲ್ ನೀಡಿದ್ದಾರೆ.
ತನ್ನ ಪೆಟ್ರೋಲ್ ಬಂಕ್ ನಲ್ಲಿ ಪೋಸ್ಟರ್ ಅಂಟಿಸಿರುವ ಸೈನಾನಿ, ತನ್ನ ಸೋದರಿಗೆ ಹೆಣ್ಣು ಮಗು ಜನಿಸಿದ್ದರಿಂದ ಹೆಚ್ಚುವರಿ ಪೆಟ್ರೋಲ್ ಉಚಿತವಾಗಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.