ಹಿರಿಯ ನಟ ಸತ್ಯಜಿತ್ ನಿಧನ: ಇವರ ಮೂಲ ಹೆಸರು ಸಯ್ಯದ್ ನಿಝಾಮುದ್ದೀನ್!
Sunday, October 10, 2021
ಬೆಂಗಳೂರು: ಸ್ಯಾಂಡಲ್ ವುಡ್‌ನ ಹಿರಿಯ ನಟ ಸತ್ಯಜಿತ್ ನಿಧನ ಹೊಂದಿದ್ದಾರೆ. ಇವರಿಗೆ 72 ವರ್ಷಗಳಾಗಿರಬಹುದೆಂದು ಅಂದಾಜಿಸಲಾಗಿದೆ.
ವಯೋಸಹಜ ಖಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೆಲ ದಿನಗಳ ಚಿಕಿತ್ಸೆ ಬಳಿಕ ನಿಧನರಾಗಿದ್ದಾರೆ.
ಅಂದಹಾಗೆ ಇವರ ಮೂಲ ಹೆಸರು ಸಯ್ಯದ್ ನಿಝಾಮುದ್ದೀನ್. ಆದರೆ ಕನ್ನಡ ಚಿತ್ರರಂಗದಲ್ಲಿ ಇವರು ಸತ್ಯಜಿತ್ ಎಂದೇ ಪ್ರಸಿದ್ದರು.
ಸುಮಾರು 650ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಇವರು ಹಲವಾರು ಸಿನಿಮಾದಲ್ಲಿ ಖಳನಾಯಕರಾಗಿ ಮಿಂಚಿದ್ದರು.