ಭಾರಿ ಸುದ್ದಿಗೆ ಗ್ರಾಸವಾಗಿದ್ದ ಟಾಲಿವುಡ್ ಸ್ಟಾರ್ ದಂಪತಿಗಳ ವಿಚ್ಚೇದನ- ಖಚಿತಪಡಿಸಿದ ನಟಿ
Saturday, October 2, 2021
ಹೈದರಾಬಾದ್ : ಭಾರಿ ಸುದ್ದಿಗೆ ಗ್ರಾಸವಾಗಿದ್ದ ಟಾಲಿವುಡ್ ಸ್ಟಾರ್ ದಂಪತಿಗಳ ವಿಚ್ಛೇದನ ಅಂತಿಮ ಹಂತ ತಲುಪಿದೆ.
ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ವಿಚ್ಛೇದನ ಪಡೆಯುತ್ತಿರುವುದು ಖಚಿತವಾಗಿದ್ದು ಇದನ್ನು ಇಂದು instagram ನಲ್ಲಿ ಸಮಂತಾ ಖಚಿತಪಡಿಸಿದ್ದಾರೆ.
ಪತಿ ನಾಗಚೈತನ್ಯ ಅವರಿಂದ ತಾನು ದೂರವಾಗುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಈ ಟಾಲಿವುಡ್ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಸ್ಟಾರ್ ದಂಪತಿಗಳ ವಿಚ್ಚೇದನ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದರೂ ಈ ಜೋಡಿ ಇದುವರೆಗೆ ಇದನ್ನು ಹೇಳಿರಲಿಲ್ಲ.