ಮೈ ನವಿರೇಳಿಸುವ Dubai Expo ಪ್ರಾರಂಭ- ಸಾವಿರ ಎಕರೆ ಜಾಗದಲ್ಲಿ ಏನೇನಿದೆ ಗೊತ್ತಾ?
Saturday, October 2, 2021
ದುಬೈ: 6 ತಿಂಗಳುಗಳ ಕಾಲ ಸುದೀರ್ಘವಾಗಿ ನಡೆಯುವ ವಿಶ್ವದ ಅತೀ ದೊಡ್ಡ ವಾಣಿಜ್ಯ ಮೇಳ ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈಯಲ್ಲಿ ಪ್ರಾರಂಭಗೊಂಡಿದೆ.
ಈ ಸುದೀರ್ಘ ಎಕ್ಸ್‌ಪೋಗಾಗಿ ದುಬೈ ಕಳೆದ ಎಂಟು ವರ್ಷಗಳಿಂದ ತಯಾರಿ ನಡೆಸಿತ್ತು.
ಸುದೀರ್ಘ ಎಕ್ಸ್‌ಪೋದಲ್ಲಿ ಭಾಗವಹಿಸಲು ಪ್ರಮುಖ ದೇಶಗಳಿಗೆ ಆಹ್ವಾನ ನೀಡಿದ್ದು, ಹಲವು ದೇಶಗಳು ಇಲ್ಲಿ ಪ್ರದರ್ಶನ ನೀಡುತ್ತಿದೆ.
ಸುಮಾರು 1080 ಏಕರೆ ವಿಸ್ತೀರ್ಣ ಪ್ರದೇಶದಲ್ಲಿ ಅಮೇರಿಕಾ, ಚೀನಾ, ಇಟಲಿ ಸಹಿತ ವಿಶ್ವದ 190ಕ್ಕೂ ಅಧಿಕ ದೇಶಗಳು ಪ್ರದರ್ಶನಕ್ಕಾಗಿ ತಮ್ಮ ಪೆವಿಲಿಯನ್‌ನನ್ನು ಸ್ಥಾಪಿಸಿದೆ.ಇಲ್ಲಿ ಸಂಸ್ಕೃತಿ, ಆಹಾರ ಕ್ರಮ, ಆವಿಷ್ಕಾರಗಳು ಪ್ರದರ್ಶನಗೊಳ್ಳಲಿದೆ.
ದುಬೈ ಆಡಳಿತಾಧಿಕಾರಿ ಹಾಗೂ ಎಕ್ಸ್‌ಪೋದ ಹಿಂದಿನ ಶಕ್ತಿಯಾದ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಈ ಎಕ್ಸ್‌ಪೋ ಮಾನವ ಪ್ರಯತ್ನಗಳನ್ನು ಪ್ರದರ್ಶಿಸಲು ಅತ್ಯುತ್ತಮ ವೇದಿಕೆ ಎಂದಿದ್ದಾರೆ.
"ಈ ನೆಲದ ನೀತಿ"ಯು ಸಂಸ್ಕೃತಿ ಮತ್ತು ಸಹಿಷ್ಣುತೆಯ ಕೇಂದ್ರವಾಗಿದೆ ಎಂದು ಯುಎಇ ಕಿರೀಟ ರಾಜಕುಮಾರ ಶೈಖ್ ಮುಹಮ್ಮದ್ ಬಿನ್ ಝಾಇದ್ ಅಲ್ ನಹ್ಯಾನ್ ಹೇಳಿದ್ದಾರೆ.