ಭಾರತೀಯರಿಗೆ ಬೂಸ್ಟರ್ ಡೋಸ್‌ನ ಅಗತ್ಯವಿಲ್ಲವಂತೆ: ಕೊರೋನಾ ದೇಶ ಬಿಟ್ಟು ಹೋಯಿತಾ?
Saturday, October 2, 2021
ನವ ದೆಹಲಿ: ಕೊರೋನಾ ಎರಡನೇ ಅಲೆ ಜೋರಾಗಿದ್ದ ಸಂದರ್ಭದಲ್ಲಿ ತಜ್ಞರು ಮೂರನೇ ಅಲೆಯ ಬಗ್ಗೆ ಸೂಚನೆಯನ್ನು ನೀಡಿದ್ದರು. ಈ ನಿಟ್ಟಿನಲ್ಲಿ 2 ಡೋಸ್ ಆದವರೂ ಕೂಡಾ ಬೂಸ್ಟರ್ ಡೋಸ್ ಆದ 3ನೇ ಡೋಸ್ ಅನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆಗಳಾಗಿತ್ತು.
ಆದರೆ ಭಾರತೀಯರಿಗೆ ಮೂರನೇ ಡೋಸ್ ನ ಅಗತ್ಯವಿಲ್ಲವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಸದ್ಯ ಭಾರತೀಯರಿಗೆ ಬೂಸ್ಟರ್ ಡೋಸ್‌ನ ಅಗತ್ಯತೆ ಕಾಣುವುದಿಲ್ಲ. ನಾವು ದೇಶಾದ್ಯಂತ ಎರಡನೇ ಡೋಸ್ ಅನ್ನು ಪೂರ್ತಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದಿದ್ದಾರೆ.
ದೇಶದಲ್ಲಿ ಚೇತರಿಕೆಯ ಪ್ರಮಾಣವೂ ಹೆಚ್ಚಾಗಿದ್ದು, 98 ಶೇಕಾಡ ಹೆಚ್ಚಳವಾಗಿದೆ ಎಂದರು. ಆದರೂ ಜಾಗೃತಿ ಪಾಲಿಸಬೇಕಾಗಿದ್ದು, ಹಬ್ಬ ಹರಿದಿನಗಳನ್ನು ಸರಳವಾಗಿ ಆಚರಿಸಬೇಕೆಂದು ಸೂಚಿಸಿದ್ದಾರೆ.