-->

ಉತ್ತರ ಪ್ರದೇಶ: ಹರ್ಗಾನ್‌ನಲ್ಲಿ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು - ಇದು ಗೋಡ್ಸೆ ಆರಾಧಕರ ಕೃತ್ಯ ಎಂದ ಕಾಂಗ್ರೆಸ್

ಉತ್ತರ ಪ್ರದೇಶ: ಹರ್ಗಾನ್‌ನಲ್ಲಿ ಪ್ರಿಯಾಂಕಾ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು - ಇದು ಗೋಡ್ಸೆ ಆರಾಧಕರ ಕೃತ್ಯ ಎಂದ ಕಾಂಗ್ರೆಸ್

ಲಕ್ನೋ/ ಉತ್ತರ ಪ್ರದೇಶ: ಕೇಂದ್ರ ಸಚಿವನ ಪುತ್ರನ ಕಾರು ಹರಿದು ಮೃತಪಟ್ಟ ರೈತರ ಕುಟುಂಬಸ್ಥರನ್ನು ಭೇಟಿಯಾಗಲು ತರಳುತ್ತಿದ್ದ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿಯನ್ನು ಹರ್ಗಾನ್‌ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿಗೆ ಈ ಹಿಂದೆಯೇ ಲಕ್ನೋ ಪೊಲೀಸರು ಗೃಹ ಬಂಧನ ವಿಧಿಸಿದ್ದರು. ಇದರ ಹೊರತಾಗಿಯೂ ಇಂದು ಬೆಳಗ್ಗೆ ದುರಂತ ಘಟನಾ ಸ್ಥಳವಾದ ಲಕ್ಷ್ಮೀಪುರ ಖೇರಿಗೆ ಪ್ರಿಯಾಂಕಾ ತೆರಳಿದ್ದಳು. ಆದರೆ ದಾರಿ ಮಧ್ಯೆ ಹರ್ಗಾನ್‌ನಲ್ಲೇ ಪೊಲೀಸರು ಆಕೆಯನ್ನು ತಡೆದಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರೂ ಪಾದಯಾತ್ರೆ ಮೂಲಕ ಘಟನಾ ಸ್ಥಳಕ್ಕೆ ತೆರಳಿದ್ದು, ತಡೆಯಲು ಟೋಲ್ ಪ್ಲಾಝಾ ಬಳಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಇನ್ನು ಈ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಬಿವಿ " ನಾವು ಬಿಜೆಪಿಯಿಂದ ಏನು ನಿರೀಕ್ಷಿಸಿದ್ದೇವೆಯೋ ಅದು ನಡೆದಿದೆ. ಮಹಾತ್ಮ ಗಾಂಧಿಯ ನಾಡಿನಲ್ಲಿ ರೈತರ ಪರ ಹೋರಾಡುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ಗೋಡ್ಸೆ ಆರಾಧಕರು ಬಂಧಿಸಿದ್ದಾರೆ" ಎಂದು ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99