ತನ್ನ ಸ್ವಂತ ಮಗಳನ್ನೇ ಗರ್ಭಿಣಿಯಾಗಿಸಿದ ಅಪ್ಪ: ಇದು ಕಾವಲುಗಾರನೇ ಖಜಾನೆ ಕೊಳ್ಳೆ ಹೊಡೆದದ್ದಕ್ಕಿಂತ ಹೇಯ ಕೃತ್ಯ ಎಂದ ಕೋರ್ಟ್
Friday, October 22, 2021
ಕೊಚ್ಚಿ: ಇದು ಹುಟ್ಟಿಸಿದ ಅಪ್ಪನೇ ತನ್ನ ಮಗಳನ್ನು ಬಸುರಿ ಮಾಡಿರುವ ಸ್ಟೋರಿ. ತನ್ನ ಮಗಳನ್ನೇ ಗರ್ಭಿಣಿ ಮಾಡಿಸಿರುವ ಪ್ರಕರಣವೊಂದು ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಈ ಪ್ರಕರಣದ ಸಂಬಂಧ ನ್ಯಾಯಾಧೀಶರು ಮಹತ್ತರವಾದ ಬಹಳಷ್ಟು ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.
ಮಗಳಿಗೇ ಕಾವಲಾಗಬೇಕಿದ್ದ ತಂದೆಯೆ ಆಕೆಯನ್ನು ಗರ್ಭಿಣಿಯಾಗಿಸಿದ್ದು, ಖಜಾನೆಯ ಕಾವಲುಗಾರನೇ ಅದನ್ನು ಕೊಳ್ಳೆ ಹೊಡೆದದ್ದಕ್ಕಿಂತಲೂ ಕೆಟ್ಟ ಕೃತ್ಯ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅಪ್ಪನನ್ನು ಕೋರ್ಟ್ ತಪ್ಪಿತಸ್ಥ ಎಂದು ಘೋಷಿಸಿದೆ.
ಸಂತ್ರಸ್ಥೆ ಯುವತಿಗೆ ಬೇರೆ ಲೈಂಗಿಕ ಸಂಪರ್ಕ ಇರುವುದನ್ನು ಒಪ್ಪಿಕೊಂಡಿದ್ದು, ಅಪ್ಪನನ್ನು ಸುಳ್ಳು ಪ್ರಕರಣದ ಸಿಲುಕಿಸಲಾಗಿದೆ ಎಂಬ ಆರೋಪಿಯ ಪರ ವಕೀಲರ ವಾದಕ್ಕೆ ಪ್ರತಿಕ್ರಯಿಸಿರುವ ನ್ಯಾಯಾಧೀಶರು, ಯುವತಿಗೆ ಇತರ ಲೈಂಗಿಕ ಸಂಪರ್ಕ ಇದೆ ಅಥವಾ ಈ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಆರೋಪಿಯು ಆರೋಪದಿಂದ ಮುಕ್ತನಾಗುದಿಲ್ಲ ಎಂದಿದ್ದಾರೆ.
ಕೇರಳದ ಜಿಲ್ಲೆಯೊಂದರಲ್ಲಿ ಸ್ವತಃ ಅಪ್ಪನೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗಲು ಕಾರಣನಾಗಿದ್ದ. ಯುವತಿ 2013ರಲ್ಲಿ ಮಗುವಿಗೆ ಜನನ ನೀಡಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಅದು ಹುಡುಗಿಯ ಅಪ್ಪನದ್ದೇ ಎಂದು ಸಾಬೀತಾಗಿತ್ತು.