ಕೂತಲ್ಲೇ ಮಲಗೋ ಅಭ್ಯಾಸ ಇದೆಯಾ?: ಹಾಗಾದ್ರೆ ಕೂಡಲೇ ನಿಲ್ಲಿಸಿ
Friday, October 22, 2021
ನವದೆಹಲಿ: ನಿಮಗೆ ಕೂತಲ್ಲೇ ಮಲಗೋ ಅಭ್ಯಾಸ ಇದೆಯಾ? ಹಾಗಾದರೆ ಇಂದೇ ನಿಲ್ಲಿಸಿ. ಯಾಕೆಂದರೆ ಇದು ಅಪಾಯಕಾರಿ ಎನ್ನುತ್ತಿದೆ ಸಂಶೋಧನೆ. ಅಷ್ಟೇ ಅಲ್ಲ ಈ ಪ್ರವೃತ್ತಿ ನಿಮ್ಮ ಜೀವಕ್ಕೂ ಕುತ್ತು ತರಬಹುದು.
ದೀರ್ಘಕಾಲ ಕೂತಲ್ಲಿಯೇ ಮಲಗುವುದರಿಂದ ಅದು ಬೆನ್ನು ನೋವು ಮತ್ತು ದೇಹದ ನೋವಿಗೆ ಕಾರಣವಾಗಬಹುದು ಎನ್ನುತ್ತದೆ ವೈದ್ಯರ ಸಂಶೋಧನೆ.
ಈ ರೀತಿ ಮಲಗುವುದರಿಂದ ರಕ್ತಸಂಚಾರದಲ್ಲಿ ಅಡಚಣೆ ಉಂಟಾಗಬಹುದು. ಇದು ರಕ್ತ ಸಂಚಾರ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದಲ್ಲದೇ, ಕ್ರಮೇಣ ಹಲವು ರೋಗಗಳಿಗೆ ಕಾರಣವಾಗಬಹುದು.
ದೀರ್ಘ ಕಾಲ ಕುಳಿತು ನಿದ್ದೆ ಮಾಡುವುದು ಆಳವಾದ ರಕ್ತನಾಳದ ಥ್ರಂಬೋಸಿಸ್ ಬೆಳವಣಿಗೆಯ ಅಪಾಯಕ್ಕೆ ಕಾರಣವಾಗಬಹುದು. ಈ ಸ್ಥಿತಿಯು ಕೆಳಗಿನ ಕಾಲುಗಳು ಅಥವಾ ತೊಡೆಗಳ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು. ಇದು ಜೀವಕ್ಕೇ ಕುತ್ತು ತರುವ ಅಪಾಯವಿದೆ.