-->

ದೇಶದ ಮೂವರು ಉತ್ತಮ ಮತ್ತು ಕಳಪೆ ಮುಖ್ಯಮಂತ್ರಿ ಗಳ ಪಟ್ಟಿ ಪ್ರಕಟ: ಯೋಗಿ ಆದಿತ್ಯನಾಥ್ ಯಾವ ಕೆಟಗರಿಯಲ್ಲಿದ್ದಾರೆ ನೋಡಿ

ದೇಶದ ಮೂವರು ಉತ್ತಮ ಮತ್ತು ಕಳಪೆ ಮುಖ್ಯಮಂತ್ರಿ ಗಳ ಪಟ್ಟಿ ಪ್ರಕಟ: ಯೋಗಿ ಆದಿತ್ಯನಾಥ್ ಯಾವ ಕೆಟಗರಿಯಲ್ಲಿದ್ದಾರೆ ನೋಡಿ

ನವದೆಹಲಿ: ಸಿ-ವೋಟರ್ ಮತ್ತು ಐಎಎನ್‌ಎಸ್ ಜಂಟಿಯಾಗಿ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಮತ್ತು ಕೆಟ್ಟ ಮುಖ್ಯಮಂತ್ರಿಗಳು ಯಾರು ಎಂಬ ಸಮೀಕ್ಷೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಿದ್ದು, ಇದೀಗ ವರದಿಯನ್ನು ಬಹಿರಂಗಗೊಳಿಸಿದೆ. 
ಸಿವೋಟರ್- ಐಎಎನ್‌ಎಸ್ ಸಮೀಕ್ಷೆಯ ಪ್ರಕಾರ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಸಮೀಕ್ಷೆಯಲ್ಲಿ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೂರನೇ ಸ್ಥಾನದಲ್ಲಿ  ಇದ್ದಾರೆ.

ಇನ್ನು ದೇಶದ ಅತ್ಯಂತ ಕೆಟ್ಟ ಮುಖ್ಯಮಂತ್ರಿಗಳ ಪಟ್ಟಿ ನೋಡುವುದಾದರೆ, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೊದಲನೇ ಸ್ಥಾನದಲ್ಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಪೈಕಿ ಎರಡನೇ ಸ್ಥಾನದಲ್ಲಿದ್ದು,  ಮೂರನೇ ಸ್ಥಾನದಲ್ಲಿ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99