-->

ಮತಾಂತರ ಐವನ್ ಡಿಸೋಝಾ ಮನೆಯಲ್ಲಿಯೇ ನಡೆದಿದೆ: ರಾಜಶೇಖರಾನಂದ ಸ್ವಾಮಿ

ಮತಾಂತರ ಐವನ್ ಡಿಸೋಝಾ ಮನೆಯಲ್ಲಿಯೇ ನಡೆದಿದೆ: ರಾಜಶೇಖರಾನಂದ ಸ್ವಾಮಿ

ಮಂಗಳೂರು: ಮತಾಂತರ ಐವನ್ ಡಿಸೋಝಾ ಮನೆಯಲ್ಲಿಯೇ ನಡೆದಿದೆ. ಅವರು ಮದುವೆಯಾಗಿರುವುದು ಕೇಸರಿ ಮನೆಯ ಹೆಣ್ಣನ್ನೇ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನ ವಿಶ್ವ ಹಿಂದು ಪರಿಷತ್, ಭಜರಂಗದಳ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ ಈ ರೀತಿ ಹೇಳಿದರು.

ಕೇಸರಿ ವಸ್ತ್ರಧಾರಣೆ ಬಗ್ಗೆ ಐವನ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಈ ರೀತಿಯಾಗಿ ಉತ್ತರಿಸಿದರು.

ವಿಧಾನಪರಿಷತ್‌ನ ಮಾಜಿ ಸದಸ್ಯರಾಗಿರುವ ಐವನ್ ಡಿಸೋಝಾ ಈಗ ಮೂಲೆ ಗುಂಪಾಗತೊಡಗಿದ್ದಾರೆ. ಅವರು ಇದೇ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದರೆ ಐ ಹೋಗಿ ವನ್ ಮಾತ್ರ ಉಳಿಯಬಹುದು ಎಂದು ಸ್ವಾಮೀಜಿ ಹೇಳಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99