-->

ಪುನೀತ್ ಪಾರ್ಥೀವ ಶರೀರ ನೋಡಬೇಕೆಂದು ರಸ್ತೆ ತಡೆದಿದ್ದ ಅಭಿಮಾನಿಗಳ ಕಣ್ತಪ್ಪಿಸಿ ಮೃತದೇಹ ರವಾನೆ ಮಾಡಿದ್ದು ಹೇಗೆ ಗೊತ್ತಾ?

ಪುನೀತ್ ಪಾರ್ಥೀವ ಶರೀರ ನೋಡಬೇಕೆಂದು ರಸ್ತೆ ತಡೆದಿದ್ದ ಅಭಿಮಾನಿಗಳ ಕಣ್ತಪ್ಪಿಸಿ ಮೃತದೇಹ ರವಾನೆ ಮಾಡಿದ್ದು ಹೇಗೆ ಗೊತ್ತಾ?

ಬೆಂಗಳೂರು: ಹೃದಯಾಘಾತಕ್ಕೊಳಗಾಗಿ‌ ಮೃತಪಟ್ಟ ತಮ್ಮ ನೆಚ್ಚಿನ‌ ನಟನ ನಿಧನ ಸುದ್ದಿ ತಿಳಿದು, ಅದಾಗಲೇ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದರು.
ಈ ಸೇರಿದ ಅಭಿಮಾನಿಗಳನ್ನು ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿತ್ತು.

ಈ ನಡುವೆ ಅಭಿಮಾನಿಗಳ ಗುಂಪೊಂದು ಪುನೀತ್ ಪಾರ್ಥೀವ ಶರೀರದ ದರ್ಶನಕ್ಕೆ ಸ್ಥಳದಲ್ಲೇ ಅವಕಾಶ ಮಾಡಿಕೊಡಬೇಕೆಂದು ರಸ್ತೆ ತಡೆ ನಡೆಸಿತ್ತು. ಇದು ಪೊಲೀಸರಿಗೆ ಮತ್ತಷ್ಟು ಸಂಕಷ್ಟ ತಂದಿತ್ತು. 

ಈ ರೀತಿ ಅವಕಾಶ ಕೊಟ್ಟರೆ ಮತ್ತಷ್ಟು ಸಂಚಾರ ದಟ್ಟಣೆ ಗೆ ಕಾರಣವಾಗಬಹುದೆಂದು ಅರಿತ ಪೊಲೀಸರು ಕೂಡಲೇ ಉಪಾಯ ಹೂಡಿದ್ದರು.

ಕೂಡಲೇ ಏಳು ಆಂಬುಲೆನ್ಸ್ ಸಿದ್ದಪಡಿಸಿದ ಪೊಲೀಸರು ಈ ಪೈಕಿ ಒಂದು ಆಂಬುಲೆನ್ಸ್‌ನಲ್ಲಿ ಪಾರ್ಥೀವ ಶರೀರವನ್ನು ಪವರ್ ಸ್ಟಾರ್ ನಿವಾಸಕ್ಕೆ ರವಾನಿಸಿದರು. 

ಈ ಪೈಕಿ ಯಾವುದರಲ್ಲಿ ಅಪ್ಪು ಪಾರ್ಥೀವ ಶರೀರ ಇದೆಯಂದು ತಿಳಿಯದೇ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದು, ಪೊಲೀಸರ ಪ್ಲ್ಯಾನ್ ಯಶಸ್ಸು ಕಂಡಿತ್ತು.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99