-->

ಇವ physiotherapist ಅಲ್ಲ; physio THE RAPIST: ಕ್ಲಿನಿಕ್‌ಗೆ ಬಂದಿದ್ದ ಅಪ್ರಾಪ್ತ, ಮಾತು ಬಾರದ ಬಾಲಕಿಗೆ ಈ ಡಾಕ್ಟರ್ ಮಾಡಿದ್ದು ಹೀನ ಕೃತ್ಯ?

ಇವ physiotherapist ಅಲ್ಲ; physio THE RAPIST: ಕ್ಲಿನಿಕ್‌ಗೆ ಬಂದಿದ್ದ ಅಪ್ರಾಪ್ತ, ಮಾತು ಬಾರದ ಬಾಲಕಿಗೆ ಈ ಡಾಕ್ಟರ್ ಮಾಡಿದ್ದು ಹೀನ ಕೃತ್ಯ?

ಮುಂಬೈ: ತನ್ನ ಕ್ಲಿನಿಕ್‌ಗೆ ಚಿಕಿತ್ಸೆಗೆಂದು ಬಂದಿದ್ದ 16 ವರ್ಷದ ಬಾಲಕಿಯನ್ನು ವೈದ್ಯನೇ ಅತ್ಯಾಚಾರ ಮಾಡಿರುವ ಹೀನ ಕೃತ್ಯ ಮುಂಬೈಯ ಕ್ಲಿನಿಕ್ ಒಂದರಲ್ಲಿ ನಡೆದಿದೆ.


ದೈಹಿಕ ನ್ಯೂನತೆ ಮತ್ತು ಮಾತುಗಾರಿಕೆಯಲ್ಲಿ ಸಮಸ್ಯೆ ಇದ್ದ 16 ವರ್ಷದ ಬಾಲಕಿಯನ್ನು ಈ ಫಿಸಿಯೋಥೆರಪಿಸ್ಟ್ ಬಳಿ ಚಿಕಿತ್ಸೆಗೆಂದು ಪೋಷಕರು ಕರೆತಂದಿದ್ದರು.

ಬಾಲಕಿಗೆ ನಿರಂತರ ಚಿಕಿತ್ಸೆಯ ಭಾಗವಾಗಿ ಈ ಫಿಸಿಯೋಥೆರಪಿಸ್ಟ್ ಬಳಿ ಪೋಷಕರು ಕರೆತರುತ್ತಿದ್ದರು. ಬಾಲಕಿ ಚಿಕಿತ್ಸೆಗೆಂದು ಬಂದ ಪ್ರತೀ ಬಾರಿಯೂ ಈ ವೈದ್ಯ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಬಾಲಕಿಗೆ ಮಾತನಾಡಲು ಸಮಸ್ಯೆ ಇದ್ದುದರಿಂದ ಈ ವಿಚಾರ ಹೊರಬಂದಿರಲಿಲ್ಲ. ಅಷ್ಟೇ ಅಲ್ಲದೆ ನಿನ್ನ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿ ಈ ವೈದ್ಯ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ.

ಬಾಲಕಿಯನ್ನು ಚಿಕಿತ್ಸೆಗೆಂದು ಒಳಕಳಿಸಿದ ಬಾಲಕ ಪೋಷಕರು ಹೊರಗೇ ಕೂರುತ್ತಿದ್ದರು. ಹಾಗಾಗಿ ಈ ವಿಚಾರ ಪೋಷಕರ ಗಮನಕ್ಕೂ ಬಂದಿರಲಿಲ್ಲ.

ಮಿತಿಮೀರಿದ ವೈದ್ಯನ ವರ್ತನೆಯಿಂದ ರೋಸಿಹೋದ ಬಾಲಕಿ ಕೊನೆಗೂ ಈ ವಿಚಾರವನ್ನು ಪೋಷಕರಿಗೆ ಬರವಣಿಗೆ ಮೂಲಕ ತಿಳಿಸಿದ್ದು, ಪೋಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99