ಇವನೆಂತಾ ದುಷ್ಟ: ನೀಡಿದ ಸಾಲ ವಾಪಸ್ ಕೇಳಿದ್ದಕ್ಕೆ ಹೀಗೆ ಮಾಡೋದಾ!?
Wednesday, October 27, 2021
ಮಲಪ್ಪುರಂ: ತಾನು ನೀಡಿದ ಸಾಲವನ್ನು ಕೇಳಲು ಬಂದ ಯುವಕನನ್ನು ಕಾರಿನ ಬೋನೆಟ್‌ನ ಮೇಲಿರಿಸಿ ಸುಮಾರು ಎರಡು ಕಿಮೀ ದೂರ ಕ್ರಮಿಸಿದ ಹೀನ ಕೃತ್ಯ ಕೇರಳದ ಮಲಪ್ಪುರಂ ಜಿಲ್ಲೆ ಒಟ್ಟಪ್ಪಾಲಂ ಎಂಬಲ್ಲಿ ನಡೆದಿದೆ.
ಇದೀಗ ಇದರ ಸಿಸಿಟಿ ದೃಶ್ಯಾವಳಿಗಳು ಹೊರಬಂದಿದ್ದು, ಪೊಲೀಸರು ಆರೋಲಿಯನ್ನು ಬಂಧಿಸಿದ್ದಾರೆ.
ಮಲಪ್ಪುರಂನ ಮುಹಮ್ಮದ್ ಫಾಸಿಲ್ ಎಂಬಾತ ಉಸ್ಮಾನ್ ಎಂಬಾತನಿಗೆ ವ್ಯವಹಾರ ಸಂಬಂಧ 75,000 ರೂ ಸಾಲ ನೀಡಿದ್ದ. ಇತ್ತೀಚೆಗೆ ಫಾಸಿಲ್ ಈ ಹಣವನ್ನು ಉಸ್ಮಾನ್ ಬಳಿ ಹಿಂದಿರುಗಿಸುವಂತೆ ಕೋರಿಕೊಂಡಿದ್ದು, ಉಸ್ಮಾನ್ ಗಣನೆಗೆ ತೆಗೆದುಕೊಂಡಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಫಾಸಿಲ್ ಮತ್ತು ಆತನ ಸ್ನೇಹಿತರು ಹಣ ಕೇಳಲೆಂದು ಉಸ್ಮಾನ್ ಮನೆಗೆ ತೆರಳಿದ್ದು, ಅಲ್ಲಿ ಉಸ್ಮಾನ್ ಇಲ್ಲ ಎಂದು ಮನೆಯವರು ಹೇಳಿದ್ದರು ಎನ್ನಲಾಗಿದೆ.
ಇದೇ ವೇಳೆ ಉಸ್ಮಾನ್ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಇದನ್ನು ಗಮನಿಸಿದ ಫಾಸಿಲ್ ಮತ್ತು ಸ್ನೇಹಿತರ ತಮ್ಮ ವಾಹನಗಳನ್ನು ಅಡ್ಡಗಟ್ಟಿ ಆತನನ್ನು ಹಿಡಿಯಲು ಯತ್ನಿಸಿದ್ದರು.
ಈ ವೇಳೆ ಉಸ್ಮಾನ್ ಕಾರನ್ನು ನಿಲ್ಲಿಸದೇ ಚಲಾಯಿಸಿದ್ದು, ಬೈಕ್ ಅಡ್ಡ ಇಟ್ಟಿದ್ದ ಫಾಸಿಲ್ ಕಾರಿನ ಬೋನೆಟ್ ಮೇಲೆ ಬಿದ್ದಿದ್ದ.
ಬೋನೆಟ್ ಮೇಲಿದ್ದ ಫಾಸಿಲ್‌ನನ್ನು ಹೊತ್ತುಕೊಂಡೇ ಉಸ್ಮಾನ್ ಸಮಾನವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದು, ಸುಮಾರು ಎರಡು ಕಿಲೋಮೀಟರ್ ಈ ರೀತಿಯಾಗಿ ಹೋಗಿದ್ದಾನೆ. ಈ ವೇಳೆ ಬೋನೆಟ್ ಮೇಲಿದ್ದ ಫಾಸಿಲ್ ವೈಪರ್ ಹಿಡಿದು ಬ್ಯಾಲೆನ್ಸ್ ಮಾಡಿದ್ದರು.
ಇದೀಗ ಇದರ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತಿದ್ದು, ಇದರ ಆಧಾರದಲ್ಲಿ ಉಸ್ಮಾನ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.