ಅಪಘಾತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಪ್ರಾರಂಭಿಸಿದರು ಉದ್ಯಮ: ಇದೀಗ ಕೋಟ್ಯಾಧಿಪತಿ ಈ Paralysed ಟಿಂಬರ್ ಉದ್ಯಮಿ
Monday, October 11, 2021
ಕಾಸರಗೋಡು: ಇದೊಂದು ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ಯಶಸ್ವಿ ಉದ್ಯಮಿಯ ಕಥೆ.
ಕೇರಳದ ಕಾಸರಗೋಡಿನಲ್ಲಿ ಮರದ ವ್ಯವಹಾರ ನಡೆಸುತ್ತಿದ್ದ ಟಿಎ ಶಾನವಾಸ್ 11 ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಕೋಮಾಗೆ ಜಾರುತ್ತಾರೆ.
ಮರದ ವ್ಯಾಪಾರ ಸಂಬಂಧ ಕಾರಿನಲ್ಲಿ ಹೊರಟಿದ್ದ ಅವರ ಕಾರು ದಾರಿ ಮಧ್ಯೆ ಅಪಘಾತಕ್ಕೆ ಈಡಾಗುತ್ತಾರೆ. ಕೂಡಲೇ ಅವರನ್ನು ಕಾಞಂಗಾಡಿನ ಆಸ್ಪತ್ರೆಗೆ ಸೇರಿಸಲಾಯಿತು. ಪ್ರಕರಣದ ಗಂಭೀರತೆ ಅರಿತ ವೈದ್ಯರು ಅವರನ್ನು ಮಂಗಳೂರಿಗೆ ಕಳುಹಿಸಿದ್ದರು.
ಮಂಗಳೂರಿನಲ್ಲಿ ಕೆಲ ತಿಂಗಳುಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದರೂ ಅವರ ಕತ್ತಿನ ಕೆಳಗಿನ ಬಲ ಸಂಪೂರ್ಣ ಕಳೆದುಕೊಂಡು ನಿಶ್ಚಲವಾಗಿತ್ತು.
ದುಡಿಮೆಯೆಲ್ಲಾ ಆಸ್ಪತ್ರೆಯಲ್ಲೇ ಮುಗಿಯತೊಡಗಿದಾಗ ಶಾನವಾಸ್ ಗೆ ಇತರರನ್ನು ಆಶ್ರಯಿಸುವುದು ಇಷ್ಟ ಇರಲಿಲ್ಲ.
ಹೀಗಾಗಿ ಆಸ್ಪತ್ರೆಯಲ್ಲೇ ಅವರು ಹೊಸ ಉದ್ಯಮಕ್ಕೆ ಯೋಜನೆ ರೂಪಿಸಿದ್ದರು. ಇದಕ್ಕಾಗಿ ಪತ್ನಿ ಒಡವೆಯನ್ನು ಮಾರಿ ಹಣ ಹೊಂದಿಸಿದರು.
ತಮ್ಮ ಊರಲ್ಲೇ ಟಿಂಬರ್ ಉದ್ಯಮ ಆರಂಭಿಸಿದರು ಶಾನವಾಸ್. ವ್ಯಾಪಾರ ಕೈ ಹಿಡಿಯತೊಡಗಿತು. ಶಾನವಾಸ್ ಹೈಡ್ರೋಲಿಕ್ ಬೆಡ್ ನಲ್ಲಿ ಮಲಗಿಯೇ ಉದ್ಯಮ ನಿಯಂತ್ರಿಸತೊಡಗಿದರು. ಬಿ.ಕಾಂ ಪದವಿಧರೆಯಾದ ಪತ್ನಿ ರಹಮತ್ ಅಕೌಂಟ್ಸ್‌ಗಳನ್ನು ನಿಭಾಯಿಸಿ ಪತಿಯ ಯಶಸ್ವೀ ಉದ್ಯಮಕ್ಕೆ ಸಾಥ್ ನೀಡಿದರು.
ಸದ್ಯ ಶಾನವಾಸ್ ಪತ್ನಿ ರಹಮತ್ ಇಬ್ಬರು ಹೆಣ್ಣು ಮಕ್ಕಳಾದ ನಿದಾ ಫಾತಿಮಾ ಮತ್ತು ಫಿದಾ ಫಾತಿಮಾ ಇದೇ ಉದ್ಯಮದಿಂದ ಸುಖೀ ಜೀವನ ನಡೆಸುತ್ತಿದ್ದಾರೆ.