ಗಂಡ ಮಾಡಿದ ಮಹಾ ಮೋಸಕ್ಕೆ ಆತನ ತಂದೆಯನ್ನೇ (ಮಾವ) ಮದುವೆಯಾದ ಯುವತಿ
Monday, October 11, 2021
ಗ್ಲೌಸೆಸ್ಟರ್/ ಬ್ರಿಟನ್: ಕೈ ಹಿಡಿದ ಗಂಡ ಆತನ ಅತ್ತೆ (ಹೆಂಡತಿಯ ತಾಯಿ)ಯೊಂದಿಗೆ ಓಡಿ ಹೋದ ಹಿನ್ನೆಲೆಯಲ್ಲಿ ದಿಕ್ಕು ತೋಚದಾದ ಯುವತಿ ಕೊನೆಗೂ ತನ್ನ ಮಾವನ್ನೇ (ಗಂಡನ ತಂದೆ) ವರಿಸಿದ ವಿಚಿತ್ರ ಪ್ರಸಂಗವೊಂದು ಬ್ರಿಟನ್‌ನ ಇಂಗ್ಲೀಷ್ ಕೌಂಟಿಯಲ್ಲಿ ನಡೆದಿದೆ.
ಇಂಗ್ಲೀಷ್ ಕೌಂಟಿಯಲ್ಲಿ ಯುವತಿ ಜೆಸ್ ಆಲಿಜ್ ತನ್ನ ಪತಿ ರಿಯಾನ್ ಶೆಲ್ಟನ್ ಜೊತೆ ವಾಸವಾಗಿದ್ದಳು. ಆದರೆ ಪತಿ ರಿಯಾನ್ ಕೆಲದಿನಗಳಿಂದ ಅತ್ತೆಯ ಜೊತೆ ಸಲುಗೆಯಿಂದಿದ್ದ. ಅವರಿಬ್ಬರನ್ನು ಯುವತಿ ಬೇರ್ಪಡಿಸಲು ಪ್ರಯತ್ನಿಸಿದ್ದಳು.
ಆದರೆ ಈ ನಡುವೆ ಏಕಾ ಏಕಿ ಅವರಿಬ್ಬರೂ ಪರಾರಿಯಾಗಿದ್ದರು. ಇದರಿಂದಾಗಿ ಯುವತಿ ಜೆಸ್ ಗೆ ದಿಕ್ಕೇ ತೋಚದಂತಾಗಿದೆ.
ಕೊನೆಗೂ ಯುವತಿ ತನ್ನ ಮಾವನನ್ನೇ ಮದುವೆಯಾಗಿದ್ದಳು. ಇತ್ತೀಚೆಗೆ ಅವರ ಪತ್ನಿ ನಿಧನರಾಗಿದ್ದು, ಅವರಿಗೊಂದು ಆಸರೆಯಾಗಲಿ ಹಾಗೂ ತನಗೂ ಗಂಡನಾಗಿ ಇರಲಿ ಎಂದು ಯುವತಿ ಈ ನಿರ್ಧಾರ ಕೈಗೊಂಡಿದ್ದಾಳೆ.