ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಸಹಿತ ನಾಲ್ಕು ಕುಟುಂಬಗಳು ಮರಳಿ ಹಿಂದೂ ಧರ್ಮಕ್ಕೆ
Monday, October 11, 2021
ಚಿತ್ರದುರ್ಗ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಗೂಳಿಹಟ್ಟಿ ಶೇಖರ್ ತಾಯಿ ಸಹಿತ ನಾಲ್ಕು ಕುಟುಂಬಗಳು ಮರಳಿ ಧರ್ಮಕ್ಕೆ ಬಂದಿದೆ.
ಈ ಕುಟುಂಬವನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಪ್ರಕ್ರಿಯೆಗೆ ಶಾಸಕ ಗೂಳಿಹಟ್ಟಿ ಡಿ ಶೇಕರ್ ಅವರು ನೇತೃತ್ವ ವಹಿಸಿದ್ದರು.
ಇಲ್ಲಿನ ಬಲ್ಲಾಳಸಮುದ್ರ ಹಾಲುರಾಮೇಶ್ವರ ಕ್ಷೇತ್ರದ ಹಾಲುರಾಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಈ ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿತು.
ಪುರುಷರಿಗೆ ಕೇಸರಿ ಶಲ್ಯ ಹಾಗೂ ಮಹಿಳೆಯರಿಗೆ ಸೀರೆ ನೀಡುವ ಮೂಲಕ ಹಿಂದೂ ಧರ್ಮಕ್ಕೆ ಅವರನ್ನು ಸ್ವಾಗತಿಸಲಾಯಿತು.
ಘರ್ ವಾಪ್ಸಿ ಪ್ರಕ್ರಿಯೆ ನನ್ನ ತಾಯಿ ಮತ್ತು ಸಹೋದರಿಯಿಂದಲೇ ಪ್ರಾರಂಭಗೊಂಡಿದೆ.
ಇನ್ನೂ 20ಕ್ಕೂ ಹೆಚ್ಚು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಲು ಆಸಕ್ತಿ ತೋರಿವೆ. ಹಂತ ಹಂತವಾಗಿ ಎಲ್ಲರನ್ನೂ ಮರು ಮತಾಂತರ ಮಾಡಲಾಗುವುದು ಶಾಸಕರು ಹೇಳಿದರು.
ಘರ್ ವಾಪಸಿ ಆದ ಕುಟುಂಬ ಪೈಕಿ ಒಂದು ಕುಟುಂಬವು ಅನಾರೋಗ್ಯ ಪೀಡಿತರಾಗಿದ್ದ ತಂದೆಯ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಮತಾಂತರಗೊಂಡಿತ್ತು. ತಂದೆಯ ಆರೋಗ್ಯಕ್ಕಾಗಿ ಮಗಳು ಮತ್ತು ತಾಯಿ ಮತಾಂತರಗೊಂಡಿದ್ದರು.