
ಕತಾರ್: ತಮಿಳುನಾಡು ಮೂಲದ ಇಬ್ಬರು ಮಕ್ಕಳು ಸಹಿತ ಮೂವರು ಸಮುದ್ರಪಾಲು
Monday, October 11, 2021
ದೋಹಾ: ಇಲ್ಲಿನ ಬೀಚ್ ಒಂದಕ್ಕೆ ವಿಹಾರಕ್ಕೆಂದು ತೆರಳಿದ ಎರಡು ಕುಟುಂಬಗಳ ಪೈಕಿ ಮೂವರು ಸಮುದ್ರ ಪಾಲಾದ ಘಟನೆ ನಡೆದಿದೆ.
ಮೃತರನ್ನು ಬಾಲಾಜಿ (38), ಪುತ್ರ ರಕ್ಷಣ್ (10) ನೆರೆಮನೆಯ ವರ್ಷಿಣಿ (12) ಎಂದು ಗುರುತಿಸಲಾಗಿದೆ.
ಸಮುದ್ರ ಪಾಲಾಗಿ ಮೃತಪಟ್ಟವರೆಲ್ಲಾ ತಮಿಳು ನಾಡು ಮೂಲದವರೆಂದು ತಿಳಿದು ಬಂದಿದೆ.
ಕತಾರ್‌ನಲ್ಲಿ ನೆಲೆಸಿದ್ದ ತಮಿಳುನಾಡಿನ ಕುಂಭಕೋಣಂ ಮತ್ತು ಚೆನ್ನೈ ಮೂಲದ ಎರಡು ಕುಟುಂಬವು ಇಲ್ಲಿನ ಮರೀನಾ ಬೀಚ್‌ಗೆ ತೆರಳಿತ್ತು.
ಬೀಚ್ ನಲ್ಲಿ ಆಟವಾಡುತ್ತಿದ್ದ ವೇಳೆ ಬೃಹತ್ ಅಲೆಗೆ ಈ ಮೂವರೂ ಕೊಚ್ಚಿಕೊಂಡು ಹೋಗಿ ಮೃತಟ್ಟಿದ್ದಾರೆ.